ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಮರಾಠಿ ಭಾಷಿಕರು ಪುಂಡರು ಪುಂಡಾಟ ಮೆರೆದಿದ್ದಾರೆ. ನಮ್ಮದೇ ಸರ್ಕಾರಿ ಬಸ್ ನಲ್ಲಿ ಓಡಾಡುವ ಪುಂಡರು ಕನ್ನಡದಲ್ಲಿ ಮಾತಾಡಿ ಮರಾಠಿ ಬರಲ್ಲಾ ಅಂದಿದ್ದಕ್ಕೆ ಡ್ರೈವರ್ ಮತ್ತು ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾರೆ. ಮತ್ತೆ ಮರಾಠಿ ಪುಂಡರು ಬಾಲ ಬಿಚ್ಚಿದ್ದು ಕನ್ನಡಪರ ಹೋರಾಟಗರರನ್ನ ಕೆರಳಿಸುವಂತೆ ಮಾಡಿದೆ.
ಸರ್ಕಾರಿ ಬಸ್ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ(52) ಮತ್ತು ಚಾಲಕ ಕತ್ತಲ್ ಸಾಬ್ ಮೊಮಿನ್ ಅಂತಾ ಇಬ್ಬರು ಕಳೆದ ಹಲವಾರು ವರ್ಷದಿಂದ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಎಂದಿನಂತೆ ಬೆಳಗಾವಿ ಸಿಟಿ ಬಸ್ ನಿಲ್ದಾಣದಿಂದ ಪಂಥ ಬಾಳೇಕುಂದ್ರಿ ಗ್ರಾಮಕ್ಕೆ ಹೊರಟ್ಟಿದ್ದರು. ಬಸ್ನಲ್ಲಿ ಓರ್ವ ಯುವತಿ ಮತ್ತು ಯುವಕ ಕೂಡ ಇದ್ದು ಟಿಕೆಟ್ ಪಡೆದುಕೊಳ್ಳುವಂತೆ ನಿರ್ವಾಹಕ ಮಹಾದೇವಪ್ಪ ಯುವತಿಗೆ ಹೇಳಿದ್ದಾನೆ. ಈ ವೇಳೆ ಆಧಾರದ ಕಾರ್ಡ್ ತೋರಿಸಿ ಮತ್ತೊಂದು ಟಿಕೆಟ್ ಪಡೆಯುವ ವಿಚಾರ ಮರಾಠಿಯಲ್ಲಿ ಹೇಳಿದ್ದಾಳೆ.
ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಆತ್ಮಹ*ತ್ಯೆ: ಸಹೋದರನಿಗೆ ಕರೆ ಮಾಡಿ ತಿಳಿಸಿ ನೇಣಿಗೆ ಕೊರಳೊಡ್ಡಿದ ವ್ಯಕ್ತಿ
ಅರ್ಥವಾಗದ ಕಂಡೆಕ್ಟರ್ ಕನ್ನಡದಲ್ಲಿ ಹೇಳಿ ಅಂತಾ ಹೇಳಿದ್ದಾರೆ. ಇಷ್ಟಕ್ಕೆ ನೀನು ಮರಾಠಿ ಬರದಿದ್ರೇ ಕಲಿತುಕೋ ಅಂತಾ ಕಂಟೆಕ್ಟರ್ ಗೆ ಅಸಡ್ಡೆಯಿಂದ ಮಾತಾಡಿದ್ದಾಳೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಇದಾದ ಬಳಿಕ ಸಣ್ಣ ಬಾಳೇಕುಂದ್ರಿ ಬರ್ತಾಯಿದ್ದಂತೆ ತಮ್ಮವರಿಗೆ ಕರೆ ಮಾಡಿ ಕರೆಯಿಸಿಕೊಂಡು ಕಂಟೆಕ್ಟರ್ ಮತ್ತು ಡ್ರೈವರ್ ಮೇಲೆ ಹಿಗ್ಗಾಮಗ್ಗಾ ಹಲ್ಲೆ ಮಾಡಿಸಿ ಅಟ್ಟಹಾಸ ಮೆರೆದಿದ್ದಾರೆ.
ಹಲ್ಲೆಗೊಳಗಾಗುತ್ತಿದ್ದಂತೆ ಕಂಡೆಕ್ಟರ್ ಮಾರಿಹಾಳ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಈ ವೇಳೆ ಪೊಲೀಸರು ಇಬ್ಬರನ್ನು ಬ್ರಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕನ್ನಡಪರ ಹೋರಾಟಗಾರರು ಕೂಡ ಆಗಮಿಸಿ ಆಕ್ರೋಶ ಹೊರ ಹಾಕಿದ್ದಾರೆ. ಆರೋಪಿಗಳನ್ನು ಬಂಧಿಸುವಂತೆ ಉಗ್ರ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಸ್ಥಳಕ್ಕೆ ಬಂದ ರೋಹನ್ ಜಗದೀಶ್ ಆರೋಪಿಗಳನ್ನು ಬಂಧಿಸುವಂತೆ ಸೂಚನೆ ನೀಡಿದ್ದಾರೆ.