ಮಂಡ್ಯ : ಕೆಲಸದಿಂದ ತೆಗದು ಹಾಕಿದ್ದಕ್ಕೆ ನೊಂದ ಕಾರ್ಮಿಕನೋರ್ವ ಕಾರ್ಖಾನೆಯ ಚಿಮಣಿ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿರುವ ಘಟನೆ ಮಂಡ್ಯದಲ್ಲಿ ನಡೆದಿದ್ದು. PSSK ಎಂಬ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕನಿಂದ ಹೈಡ್ರಾಮ ನಡೆದಿದೆ.
ಮಂಡ್ಯದ ಪಾಂಡವಪುರದ PSSK ಸಕ್ಕರೆ ಕಾರ್ಖಾನೆಯಲ್ಲಿ ಘಟನೆ ನಡೆದಿದ್ದು. ರಾಮಕೃಷ್ಣ ಎಂಬಾತ ಕಾರ್ಖಾನೆಯಲ್ಲಿ ಹೊರಗುತ್ತಿಗೆ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಆದರೆ ಕಾರ್ಖಾನೆ ಆಡಳಿತ ಮಂಡಳಿ ರಾಮಕೃಷ್ಣನನ್ನು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಆಕ್ರೋಶಗೊಂಡ ರಾಮಕೃಷ್ಣ ಕಾರ್ಖಾನೆಯ ಚಿಮಣಿ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.
ಇದನ್ನೂ ಓದಿ :ಪ್ರಧಾನಿ ಸ್ಥಾನದಿಂದ ಮೋದಿಯನ್ನ ಬದಲಾಯಿಸಿ: ಬಿಜೆಪಿಗರಿಗೆ ಕರೆ ನೀಡಿದ ಸಂತೋಷ್ ಲಾಡ್
ರಾಮಕೃಷ್ಣ ಕಳೆದ 25 ವರ್ಷದಿಂದ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು. ಕೆಲಸದಿಂದ ತೆಗೆಯಬಾರದು ಎಂದು ಕೋರ್ಟ್ ಆದೇಶವಿದ್ದರೂ ಕೆಲಸದಿಂದ ವಜಾ ಮಾಡಿದ್ದಕ್ಕೆ ಆಕ್ರೋಶಗೊಂಡು ಈ ರೀತಿ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳಶ ಸಿಬ್ಬಂದಿ ಭೇಟಿ ನೀಡಿ ರಾಮಕೃಷ್ಣರ ಮನವೊಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.