ಬೆಳಗಾವಿ : ರಾಜ್ಯದಲ್ಲಿ ಸಿಎಂ ಬದಲಾಗುತ್ತಾರೆ ಎಂಬ ವಿಚಾರ ಕಳೆದ ಕೆಲ ತಿಂಗಳಿಂದ ಬಾರಿ ಸದ್ದು ಮಾಡುತ್ತಿದ್ದು. ಇದಕ್ಕೆ ಪೂರಕವಾಗಿ ರಾಜ್ಯ ಬಿಜೆಪಿಗರು ಈ ಕುರಿತು ಭವಿಷ್ಯ ನುಡಿಯುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂತೋಷ್ ಲಾಡ್ ಶೀಘ್ರದಲ್ಲೆ ಪ್ರಧಾನಿ ಬದಲಾಗುತ್ತಾರೆ ಎಂದು ನನಗೆ ಮಾಹಿತಿದ ಇದೆ ಎಂದು ಬಿಜೆಪಿಗರಿಗೆ ಕೌಂಟರ್ ಮಾಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸಂತೋಷ್ ಲಾಡ್ ‘ಡಿಕೆಶಿಗೆ ಎರಡು ಪದವಿ ಕೊಟ್ಟಿದ್ದಕ್ಕೆ ಸಚಿವ ರಾಜಣ್ಣ ಅಸಮಾಧಾನ ವಿಚಾರವಾಗಿ ಭಿನ್ನಭಿಪ್ರಾಯ ಬಂದಾಗ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ಪಕ್ಷದಲ್ಲಿನ ಸಮಸ್ಯೆಗೆ ಹೈಕಮಾಂಡ ಸೂಕ್ತವಾದ ಮಾರ್ಗದರ್ಶನ, ಪರಿಹಾರ ಕಂಡು ಹಿಡಿಯುತ್ತದೆ. ಸರ್ಕಾರ ಬಂದ ಮೂರನೇ ತಿಂಗಳಿನಿಂದ ಈ ಮಾತು ಆರಂಭವಾಗಿದೆ. ಈಗ ಎರಡು ವರ್ಷವಾಗುತ್ತಿದೆ ಇನ್ನು ಏನು ಆಗಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ಒಂದೇ ಕುಟುಂಬದ ನಾಲ್ವರು ಆತ್ಮಹ*ತ್ಯೆ: ಸಹೋದರನಿಗೆ ಕರೆ ಮಾಡಿ ತಿಳಿಸಿ ನೇಣಿಗೆ ಕೊರಳೊಡ್ಡಿದ ವ್ಯಕ್ತಿ
ಪ್ರಧಾನಿ ಬದಲಾವಣೆ ಮಾಡಿ, ನಿತಿನ್ ಗಡ್ಕರಿಯನ್ನು ಪ್ರಧಾನಿ ಮಾಡಿ !
ಮುಂದುವರಿದು ಮಾತನಾಡಿದ ಸಂತೋಷ್ ಲಾಡ್ ‘ ನಮಗೆ ಇರುವ ಮಾಹಿತಿ ಪ್ರಕಾರ ಚಂದ್ರಬಾಬು ನಾಯ್ಡು ಪ್ರಧಾನಮಂತ್ರಿ ಆಗಬಹುದು. ಇಲ್ಲವೇ ನಿತೇಶಕುಮಾರ, ನಿತಿನ್ ಗಡ್ಕರಿ ಆಗಬಹುದು. ನಮಗೆ ಪ್ರಧಾನಿ ಬದಲಾಗುತ್ತಾರೆ ಎಂಬ ಮಾಹಿತಿ ಇದೆ. ಇದರ ಕುರಿತು ನಾನೂ ಕೂಡ ಬಿಜೆಪಿ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ.
ಮೋದಿ ಪ್ರಧಾನಿ ಆಗಿದ್ದು ಸಾಕು. ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿಸಿ ಬೇರೆಯವರನ್ನು ಪ್ರಧಾನಿ ಮಾಡಿ. ನಿತಿನ್ ಗಡ್ಕರಿಯನ್ನು ಪ್ರಧಾನಿ ಮಾಡಿ. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಾನೇ ಬುದ್ಧಿವಂತ, ವಿಶ್ವ ಗುರು ಅಂತಾ ಬಿಜೆಪಿಯವರು ಹೇಳಿದ್ರೆ ಹೇಗೆ. ಇದೇನು ನಮ್ಮ ವೈಯಕ್ತಿಕ ಅಂಜೇಡಾ ಅಲ್ಲವೇ ಅಲ್ಲಾ ಎಂದು ಸಚಿವ ಲಾಡ್ ಬಿಜೆಪಿಗರಿಗೆ ಟಾಂಗ್ ನೀಡಿದ್ದಾರೆ.