ಮೈಸೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು. ಪತ್ನಿ ಮಕ್ಕಳಿಗೆ ವಿಷ ನೀಡಿದ ವ್ಯಕ್ತಿ ನಂತರ ತಾನೂ ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ಅಮೇರಿಕಾದಲ್ಲಿ ನೆಲೆಸಿದ್ದ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದರು ಎಂದು ತಿಳಿದು ಬಂದಿದೆ.
ವಿಶ್ವೇಶ್ವರಯ್ಯ ನಗರದ ಅಪಾರ್ಟ್‍ಮೆಂಟ್‍ನಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಚೇತನ್ (45), ರೂಪಾಲಿ (43), ಪ್ರಿಯಂವದ ಮತ್ತು ಕುಶಾಲ್ (15) ಎಂದು ಗುರುತಿಸಲಾಗಿದೆ. ಚೇತನ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಉಳಿದವರ ಮೃತದೇಹಗಳು ಅಪಾರ್ಟ್‍ಮೆಂಟ್‍ನಲ್ಲಿ ಪತ್ತೆಯಾಗಿವೆ.
ಇದನ್ನೂ ಓದಿ :ಮಾನಸಿಕ ಅಸ್ವಸ್ಥ ಪತ್ನಿಯನ್ನು ಕಟ್ಟಡದಿಂದ ತಳ್ಳಿ ಕೊಲೆ ಮಾಡಿದ ಗಂಡ
ಚೇತನ್ ಮೂಲತಃ ಹಾಸನನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದನು ಎಂದು ತಿಳಿದು ಬಂದಿದ್ದು. ಲೇಬರ್ ಕಂಟ್ರ್ಯಾಕ್ಟರ್ ಆಗಿ ಚೇತನ್ ಕೆಲಸ ಮಾಡುತ್ತಿದ್ದರು. ಆದರೆ ಇಂದು ಬೆಳಗಿನ ಜಾವ ಚೇತನ್ ಅಮೇರಿಕಾದಲ್ಲಿರುವ ಸಹೋದರನಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ಪೋನ್ ಕಟ್ ಮಾಡಿದ್ದನು.
ಇದರಿಂದ ಗಾಬರಿಯಾದ ಸಹೋದರ ಚೇತನಾ ಪತ್ನಿಯ ತಂದೆ-ತಾಯಿಗೆ ಕರೆ ಮಾಡಿ ತಿಳಿಸಿದ್ದನು. ಆದರೆ ಅವರು ಮನೆಗೆ ಬಂದು ನೋಡುವಷ್ಟರಲ್ಲಿ ನಾಲ್ವರು ಸಾವನ್ನಪ್ಪಿದ್ದರು ಎಂದು ಮೈಸೂರು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಹೇಳಿಕೆ ನೀಡಿದ್ದಾರೆ. ಸಾವಿಗೆ ಇನ್ನು ನಿಖರ ಕಾರಣ ಏನೆಂದು ಇನ್ನು ತಿಳಿದು ಬಂದಿಲ್ಲ. ನಾಲ್ಕು ಮೃತದೇಹಗಳನ್ನು ಕೆಆರ್ ಆಸ್ಪತ್ರೆ ಶವಗಾರಕ್ಕೆ ರವಾನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.