Wednesday, April 2, 2025

ಕಾವೇರಿ ನದಿಯಲ್ಲಿ ತೇಲುತ್ತಾ ಯೋಗ ಮಾಡುತ್ತಿದ್ದ ಯೋಗಪಟು ಸಾ*ವು: ಕಾರಣ ನಿಗೂಡ !

ಚಾಮರಾಜನಗರ: ಯೋಗಪಟುವೊಬ್ಬರು ನೀರಿನಲ್ಲಿ ಯೋಗ ಮಾಡುತ್ತಲೇ ಪ್ರಾಣಬಿಟ್ಟಿರುವ ಘಟನೆ ಚಾಮರಾಜನಗರದ ಕೊಳ್ಳೇಗಾಲದ ದಾಸನಪುರ ಬಳಿ ನಡೆದಿದೆ. ಮೃತ ದುದೈವಿಯನ್ನು 78 ವರ್ಷದ ನಾಗರಾಜ್​ ಎಂದು ಗುರುತಿಸಲಾಗಿದೆ.

ಕೊಳ್ಳೇಗಾಲ ಪಟ್ಟಣದ ಲಕ್ಷ್ಮಿನಾರಾಯಣ ದೇವಸ್ಥಾನ ಬಡಾವಣೆಯ ನಾಗರಾಜು (78) ತೀರ್ಥ ಸ್ನಾನ ಮಾಡಲೆಂದುಹರಿಯುವ ಕಾವೇರಿ ನದಿಗೆ ಇಳಿದಿದ್ದರು. ನದಿ ನೀರಿನಲ್ಲಿ ತೇಲುತ್ತಾ ಯೋಗ ಮಾಡುತ್ತಿದ್ದರು. ಎಷ್ಟು ಹೊತ್ತಾದರೂ ತೇಲುವ ಸ್ಥಿತಿಯಲ್ಲೇ ಇದ್ದರು. ಜೊತೆಗೆ ಬಂದಿದ್ದವರು ಅನುಮಾನಗೊಂಡು ಹತ್ತಿರ ಹೋಗಿ ನೋಡಿದಾಗ ಮೃತಪಟ್ಟಿರುವುದು ಗೊತ್ತಾಗಿದೆ.

ಇದನ್ನೂ ಓದಿ :ತಿಥಿ ಕಾರ್ಯಕ್ಕೆ ಹೋಗಿದ್ದ ಇಬ್ಬರು ಯುವಕರು ಅಪಘಾತದಲ್ಲಿ ಸಾ*ವು !

ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದ್ದು. ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಮೃತದೇಹವನ್ನು ಕೊಳ್ಳೆಗಾಲ ಉಪವಿಭಾಗ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES