ಅದೆಂತಹ ಭಯಾನಕ ಸನ್ನಿವೇಶದ ದೃಶ್ಯಾವಳಿ ಇದು. ಒಂದಿಷ್ಟೆ ಇಷ್ಟು ಸೆಕೆಂಡ್ ದಾಟಿದ್ದರು ಮಗುವೊಂದು ಕಾರಿನಡಿಗೆ ಬಿದ್ದು ತನ್ನ ಪ್ರಾಣವನ್ನೆ ಕಳ್ಕೊತ್ತಿತ್ತೋ. ಏನೋ ಹೆತ್ತ ಕರುಳಿನ ಸಮಯ ಪ್ರಜ್ಞೆಯಿಂದ ಅಪ್ಪನೊಬ್ಬ ತನ್ನ ಕಂದಮ್ಮನನ್ನು ಕಾಪಾಡುತ್ತಿರುವ ದೃಶ್ಯಾವಳಿ ಇವು. ಈ ವಿಡಿಯೋ ಇದೀಗ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಮಗಳ ಪಾಲಿಗೆ ಅಪ್ಪನೆ ಹೀರೊ ಆಗಿದ್ದಾನೆ ನೋಡಿ.
ಶಾಲೆ ಬಿಟ್ಟ ತಕ್ಷಣ ಪುಟ್ಟ ಮಕ್ಕಳಿಗೆ ಮನೆ ಸೇರ್ಕೊಳ್ಳೊ ತವಕ. ಅದ್ಯಾವಗ ಮನೆ ಸೇರ್ತಿವೊ ಅಮ್ಮನ ಮುಖ ಕಾಣ್ತಿವೊ ಎಂಬ ತುಡಿತ. ಇದೀಗ ಇಲ್ಲೊಂದು ಮಗು ಶಾಲೆಯಿಂದ ಮನೆಗೆ ಮರಳುತ್ತಿದ್ದ ಸಮಯದಲ್ಲಿ ಮಗು ರಸ್ತೆಯ ಆ ಬದಿಯಲ್ಲಿ ನಿಂತಿತ್ತು. ಸ್ಕೂಲ್ ಬಸ್ ಚಾಲಕ ಮಗುವನ್ನು ರಸ್ತೆಯ ಆ ಕಡೆ ಬಿಟ್ಟು ಹೋಗಿದ್ದ ಅಂತ ಕಾಣ್ಸುತ್ತೆ. ಇನ್ನು ಮಗುವನ್ನು ಮನೆಗೆ ಕರೆದೊಯ್ಯೊಣ ಅಂತ ಅಪ್ಪ ಅಮ್ಮ ಇಬ್ಬರು ರಸ್ತೆ ಬಳಿ ಬಂದಿದ್ದರು.
— CCTV CORNER ⚠️ (@cctvcorner) February 8, 2025
ಇದನ್ನೂ ಓದಿ :ಸಿದ್ದರಾಮಯ್ಯ ನಮ್ಮ ನಾಯಕ, ಎಲ್ಲಾ ಚುನಾವಣೆಗೂ ಅವರು ಬೇಕೂ: ಡಿಕೆ. ಶಿವಕುಮಾರ್
ರಸ್ತೆಯಲ್ಲಿ ವಾಹನದ ದಟ್ಟಣೆ ತುಸು ಹೆಚ್ಚೆ ಇದೆ ನೋಡಿ. ತಾಯಿ ಆ ಕಡೆ ಹೋಗಿ ಮಗುವನ್ನು ಕರೆದುಕೊಂಡು ಬರೋಣ ಅಂತ ರಸ್ತೆ ದಾಟೋದಕ್ಕೆ ನಿಂತಿದ್ಲು. ಅಷ್ಟರಲ್ಲಿ ಮಗು ತಕ್ಷಣ ತಾಯಿ ಇದ್ದ ಕಡೆನೆ ಓಡಿ ಬಂದಿದೆ. ಅಷ್ಟರಲ್ಲಿ ಕಾರೊಂದು ಸ್ಪೀಡ್ ಆಗಿ ಬಂದಿದೆ. ಕ್ಷಣ ಮಾತ್ರದಲ್ಲಿ ತಾಯಿ ಹೃದಯ ಅಲರ್ಟ್ ಆಗಿ ಗಂಡನನ್ನು ಮುಂದಕ್ಕೆ ಕಳಿಸಿದ್ದಾಳೆ. ಕ್ಷಣ ಮಾತ್ರದಲ್ಲಿ ಮಗುವಿನ ತಂದೆ ಓಡಿ ಹೋಗಿ ತನ್ನ ಮಗುವನ್ನು ಕಾಪಾಡಿದ್ದಾನೆ.
ಒಂದೆ ಒಂದು ಸೆಕೆಂಡ್ ಹೆಚ್ಚು ಕಮ್ಮಿಯಾಗ್ತಿದ್ರೂ ಅಪ್ಪ ಮಗು ಇಬ್ರು ಕೂಡ ಕಾರಿನಡಿಗೆ ಬೀಳ್ತಿದ್ರೋ ಏನೊ. ಆಯುಷ್ಯ ಒಂದು ಗಟ್ಟಿಯಾಗಿದ್ದರೆ ಅದೆಂತಹ ಅಪಾಯದ ಸನ್ನಿವೇಶದಲ್ಲೂ ಸಾವಿನ ದವಡೆಯಿಂದ ಬಚವಾಗ್ತಾರೆ ಎಂಬುದಕ್ಕೆ ಈ ದೃಶ್ಯಾವಳಿನೆ ಸಾಕ್ಷಿಯಾಗಿದೆ ನೋಡಿ. ಎದೆ ಝಲ್ಲೆನಿಸುವ ಈ ದೃಶ್ಯಾವಳಿ ಇದೀಗ ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಅಪ್ಪ ಮಗಳ ಆಯುಷ್ಯ ಸಿಕ್ಕಾಪಟ್ಟೆ ಗಟ್ಟಿಯಾಗಿದೆ ಎಂದು ನೆಟ್ಟಿಗರು ಅಭಿಪ್ರಾಯ ತಿಳಿಸಿದ್ದಾರೆ. ಮಗಳನ್ನು ಕಾಪಾಡಿದ ಅಪ್ಪ ಮಗಳ ಪಾಲಿಗೆ ಹೀರೊ ಆಗಿ ಮಿಂಚಿದ್ದಾನೆ.