ಮೈಸೂರು: ಸ್ಯಾಂಡಲ್ ವುಡ್ನ ನಟ ರಾಕ್ಷಸ ಡಾಲಿ ಧನಂಜಯ್, ಚಿತ್ರದುರ್ಗದ ವೈದ್ಯರಾಗಿರುವ ಧನ್ಯತಾ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಧನಂಜಯ್ ಜೀವನದಲ್ಲಿ ವಿಜ್ಞನ ಮತ್ತು ನಂಬಿಕೆ ಎರಡು ಇರಬೇಕು ಎಂದು ಹೇಳಿದರು.
ಮದುವೆ ನಂತರ ಮಾಧ್ಯಮದ ಜೊತೆ ಮಾತನಾಡಿದ ಧನಂಜಯ್ ‘ಮದುವೆ ನಾವಂದುಕಂಡಿದ್ದಕ್ಕಿಂತ ಚನ್ನಾಗಿ ಆಗಿದೆ. ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.ಕನ್ನಡ ಚಿತ್ರರಂಗ ನನ್ನ ಕುಟುಂಬ ಇದ್ದ ಹಾಗೆ.
ನನ್ನ ಪ್ರಾರಂಭದ ದಿನಗಳಿಂದಲೂ ನನ್ನ ಕೈ ಹಿಡಿದಿದ್ದಾರೆ. ಅವರ ಆಶೀರ್ವಾದ ನನ್ನ ಮೇಲೆ ಇದೆ.
ನಾನು ಕೂಡ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ :ಕಾವೇರಿ ನದಿಯಲ್ಲಿ ತೇಲುತ್ತಾ ಯೋಗ ಮಾಡುತ್ತಿದ್ದ ಯೋಗಪಟು ಸಾ*ವು: ಕಾರಣ ನಿಗೂಡ !
ಮುಂದುವರಿದು ಮಾತನಾಡಿದ ಧನಂಜಯ್ ‘ನಾವು ಎಲ್ಲವನ್ನ ಗೌರವಿಸಬೇಕ, ಇದು ಆಸ್ತಕತೆ ಮತ್ತು ನಾಸ್ತಿಕತೆ ಅನ್ವಯಿಸುತ್ತದೆ. ನನ್ನ ಬಾಲ್ಯದ ದಿನಗಳಿಂದಲೂ ನಮ್ಮೂರ ಜಾತ್ರೆಲಿ ಭಾಗಿಯಾಗಿದ್ದೇನೆ. ಇದೆಲ್ಲವೂ ನಮ್ಮೂರಲ್ಲಿ ನಡೆಯುತ್ತಿರುವ ಜಾತ್ರೆಯ ಬಗ್ಗೆ ತಿಳಿಸುತ್ತದೆ. ವಿಜ್ಞಾನವು ಬೇಕು, ನಂಬಿಕೆಯು ಬೇಕು.
ನನ್ನ ಹೆಂಡತಿ ವಿಜ್ಞಾನದಲ್ಲಿದ್ದಾರೆ. ನಮ್ಮ ತಾಯಿ ಆಸ್ಪತ್ರೆ ಒಳ ಹೋಗುವ ಮುನ್ನ ದೇವರಿಗೆ ಕೈ ಮುಗಿಯುತ್ತಾರೆ.
ನನ್ನ ತಾಯಿಯ ನಂಬಿಕೆಯನ್ನು ನಾನು ಗೌರವಿಸಬೇಕು. ಮದುವೆ ಬಳಿಕ ಸ್ವಲ್ಪ ವಿರಾಮ ಇದ್ದೆ ಇರುತ್ತದೆ.
ನಂತರ ಅವರರು ಅವರ ವೃತ್ತಿ ಮಾಡ್ತಾರೆ. ನಾನು ಚಿತ್ರ ರಂಗದಲ್ಲಿ ಭಾಗಿಯಾಗುತ್ತೇನೆ. ಮದುವೆ ಬಳಿಕ ಡಾಲಿ ಧನಂಜಯ ಹೇಳಿಕೆ.