ಉತ್ತರಪ್ರದೇಶ :ಸೊಸೆ ವರದಕ್ಷಿಣೆ ನೀಡಲೆಂದು ಕೋಪಗೊಂಡ ಅತ್ತೆಯೊಬ್ಬಳು ಸೊಸೆಗೆ ಎಚ್‌ಐವಿ ಸೋಂಕಿನ ಇಂಜೆಕ್ಷನ್ ಚುಚ್ಚಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಘಟನೆ ಕುರಿತು ತನಿಖೆ ನಡೆಸುವಂತೆ ಸಹರಾನ್ ಪುರ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ ಎಂದು ತಿಳಿದು ಬಂದಿದೆ.
ವರದಕ್ಷಿಣೆಯಾಗಿ 10 ಲಕ್ಷ ರೂ. ಹಾಗೂ ಎಸ್ಯುವಿ ಕಾರು ಕೊಟ್ಟಿಲ್ಲವೆಂದು ಅತ್ತೆ-ಮಾವ ಸೊಸೆಗೆ ಎಚ್‌ಐವಿ ಸೋಂಕಿತ ಸೂಜಿ ಚುಚ್ಚಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ದೂರು ದಾಖಲಿಸಿದ್ದು. ಮಹಿಳೆಯ ಪತಿ, ಅತ್ತೆ ಸೇರಿ ಒಟ್ಟು ನಾಲ್ಕು ಜನರ ವಿರುದ್ಧ ಐಪಿಸಿ 307, 498ಎ, 323, 328, 406 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೇ 2024 ರಲ್ಲಿ ಹರಿದ್ವಾರದಲ್ಲಿರುವ ಮಹಿಳೆಯ ಅತ್ತೆಯ ಮನೆಯಲ್ಲಿ ನಡೆದಿತ್ತು ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಬಾಡಿಗೆಗೆ ಬಂದವ ತನ್ನದೇ ಕಾರಿನಲ್ಲಿ ಮೃತದೇಹವಾಗಿ ಪತ್ತೆ: ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು
ಘಟನೆ ಕುರಿತು ಸಂತ್ರಸ್ತೆಯ ತಂದೆ ಮಾತನಾಡಿದ್ದು. 2023ರಲ್ಲಿ ಮಗಳ ಮದುವೆ ಮಾಡಿಕೊಟ್ಟಿದ್ದೆವು. ಸುಮಾರು 45 ಲಕ್ಷ ಖರ್ಚು ಮಾಡಿದ್ದೆವು. ವರದಕ್ಷಿಣೆಯಾಗಿ ವರನ ಕುಟುಂಬಕ್ಕೆ 10ಲಕ್ಷ ರೂಪಾಯಿ ಹಣ. ಎಸ್ಯುವಿ ಕಾರು ನೀಡಿದ್ದೆವು. ಆದರೆ ಅವರು ಹೆಚ್ಚುವರಿಯಾಗಿ 10 ಲಕ್ಷ ಹಣ ಮತ್ತು ದೊಡ್ಡ ಎಸ್ಯುವಿ ಕೇಳಿದ್ದಾರೆ ಎಂದು ಸಂತ್ರಸ್ಥೆ ತಂದೆ ಖಾಸಗಿ ವಾಹಿನಿಗೆ ತಿಳಿಸಿದ್ದಾರೆ.
ಗಂಡನ ಮನೆಯವರು ಕೇಳಿದಷ್ಟು ವರದಕ್ಷಿಣೆ ಕೊಡದಿದ್ದಕ್ಕೆ ಮದುವೆಯಾಗ ನಂತರ ಮಹಿಳೆಗೆ ಅತ್ತೆ ಮಾವನ ಮನೆಯಲ್ಲಿ ಕಿರುಕುಳ ನೀಡಲಾಗುತಿತ್ತು. ಮಗನಿಗೆ ಮತ್ತೊಂದು ಮದುವೆ ಮಾಡುವುದಾಗಿ ಹೇಳಿ ಸಂತ್ರಸ್ಥೆಯನ್ನು ಮನೆಯಿಂದ ಹೊರಗೆ ಕಳುಹಿಸಿದ್ದರು ಎಂದು ತಿಳಿದು ಬಂದಿದೆ. ಮನೆಯಿಂದ ಹೊರ ಬಂದ ಮಹಿಳೆ ಮೂರು ತಿಂಗಳ ತವರು ಮನೆಯಲ್ಲಿದ್ದಳು. ಆದರೆ ನಂತರ ಆಕೆಯನ್ನು ಗಂಡನ ಮನೆಗೆ ಕಳುಹಿಸಲಾಯಿತು.
ಆದರೆ 2024ರ ಮೇನಲ್ಲಿ ಆಕೆಯ ಅತ್ತೆ ಮಾವ ಬಲವಂತವಾಗಿ ಆಕೆಗೆ ಎಚ್‌ಐವಿ ಸೋಂಕಿತ ಸಿರಿಂಜ್ ಅನ್ನು ಚುಚ್ಚಿದ್ದರು. ಆಕೆಯ ಆರೋಗ್ಯ ಶೀಘ್ರವಾಗಿ ಹದಗೆಟ್ಟಿತ್ತು. ವೈದ್ಯಕೀಯ ಪರೀಕ್ಷೆ ಬಳಿಕ ಆಕೆ ಎಚ್‌ಐವಿ ಪಾಸಿಟಿವ್ ಆಗಿರುವುದು ತಿಳಿದುಬಂದಿತ್ತು. ಆದರೆ ಆಕೆಯ ಪತಿಗೆ ಎಚ್‌ಐವಿ-ನೆಗೆಟಿವ್ ಕಂಡುಬಂದಿದೆ.