ನಟ ದರ್ಶನ್ಗೆ ಇಂದು ಹುಟ್ಟುಹಬ್ಬದ ಸಂಭ್ರಮವಿದ್ದು. ಅನಾರೋಗ್ಯದ ಕಾರಣ ಈ ಬಾರಿ ನಟ ದರ್ಶನ್ ತಮ್ಮ ಅಭಿಮಾನಿಗಳ ಜೊತೆ ಹುಟ್ಟಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಹಾಗಂತ ಅಭಿಮಾನಿಗಳಲ್ಲಿ ಸಡಗರ ಕಮ್ಮಿಯಾಗಿಲ್ಲ. ಇದರ ನಡುವೆ ದಿ ಡೆವಿಲ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು. ಇದು ಹುಟ್ಟುಹಬ್ಬದ ಸಂಭ್ರಮವನ್ನು ಮತ್ತಷ್ಟು ಹಿಮ್ಮಡಿಗೊಳಿಸಿದೆ.
ಮಿಲನ ಪ್ರಕಾಶ್ ಅವರು ನಿರ್ದೇಶನ ಮಾಡುತ್ತಿರುವ ದಿ ಡೆವಿಲ್ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ ದೊಡ್ಡದು. ಟೀಸರ್ ಮೂಲಕ ಆ ನಿರೀಕ್ಷೆಯನ್ನು ಡಬಲ್ ಮಾಡಲಾಗಿದೆ. ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆಗಿರುವ ಈ ಟೀಸರ್ ಇದೀಗ ವೈರಲ್ ಆಗುತ್ತಿದೆ.
ಇದನ್ನೂ ಓದಿ : ದನದ ಕೊಟ್ಟಿಗೆಗೆ ಬೆಂಕಿ: 6 ಹಸು, 2 ಕರು ಸಜೀವ ದಹನ
‘ದಿ ಡೆವಿಲ್’ ಸಿನಿಮಾದ ಟೀಸರ್ನ ಅವಧಿ 1 ನಿಮಿಷ 4 ಸೆಕೆಂಡ್ ಇದ್ದು. ಕಂಪ್ಲೀಟ್ ಟೀಸರ್ ಆ್ಯಂಕ್ಷನ್ ಭರಿತವಾಗಿದೆ. ಇಡೀ ಟೀಸರ್ನಲ್ಲಿ ಕೇವಲ ‘ಚಾಲೆಂಜ್’ ಎಂಬ ಒಂದೆ ಸಂಭಾಷಣೆ ಇದ್ದರು. ದರ್ಶನ್ ಗನ್ ಹಿಡಿದು ತೋರಿರುವ ಗತ್ತು ಅವರ ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಟೀಸರ್ ಬಿಡುಗಡೆಯಾದ ಕೆಲವೆ ನಿಮಿಷಗಳಲ್ಲಿ ಲಕ್ಷಾಂತರ ಭಾರಿ ವೀಕ್ಷಣೆ ಕಂಡಿದೆ.