ಬೆಂಗಳೂರು : ಇತ್ತೀಚೆಗೆ ಖಾಸಗಿ ವಾಹಿನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದು. ಮುಂದಿನ ಚುನಾವಣೆಗೂ ಸ್ಪರ್ಧಿಸುವ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ಪುಷ್ಟಿ ಕೊಡುವಂತೆ ಸಿಎಂ ಬಣದ ಅನೇಕ ನಾಯಕರು ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುವ ಕುರಿತು ಹೇಳಿಕೆ ನೀಡಿದ್ದರು.
ಈ ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್ ಇಂದು ಮಾಧ್ಯಮ ಹೇಳಿಕೆ ನೀಡಿದ್ದು. ‘ಸಿದ್ದರಾಮಯ್ಯ ಅವರು ನಮ್ಮ ಮುಖ್ಯಮಂತ್ರಿಗಳು, ಎಲ್ಲಾ ಚುನಾವಣೆಗಳಿಗೂ ಅವರು ನಮಗೆ ಬೇಕು. ಪಕ್ಷ ಅವರಿಗೆ ಎರಡು ಬಾರಿ ಸಿಎಂ ಆಗುವ ಅವಕಾಶ ನೀಡಿದೆ. ದಿನ ಬೆಳಗಾದರೆ ಅವರ ಸುದ್ದಿ ಎತ್ತಿಕೊಳ್ಳುವುದು ಬೇಡ. ಅವರು ಹೆಸರು ದುರುಪಯೋಗ ಮಾಡೋದು ಬೇಡ.
ಇದನ್ನೂ ಓದಿ :ಸಂಘ ಪರಿವಾರದವರು ಬುರ್ಕಾ ಹಾಕೊಂಡು ಗಲಾಟೆ ಮಾಡೋಕೆ ಹೋಗ್ತಾರೆ: ಬಿ.ಕೆ ಹರಿಪ್ರಸಾದ್
ಸಿದ್ದರಾಮಯ್ಯನವರು ಸ್ಥಳೀಯ ಚುನಾವಣೆಯಿಂದ ಲೋಕಸಭೆವರೆಗೆ ಬೇಕು. ಎರಡನೇ ಬಾರಿ ಸಿಎಂ ಆಗಿ ಒಳ್ಳೆ ಕೆಲಸ ಮಾಡ್ತಾ ಇದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಿ ಆಹಾರ ಆಗಬಾರದು. ನಮ್ಮಲ್ಲಿ ಗೊಂದಲದ ಯಾವ ಹೇಳಿಕೆಯೂ ಇಲ್ಲ. ಕಾಂಗ್ರೆಸ್ ಪಕ್ಷ ಎಲ್ಲವನ್ನು ಗಮನಿಸುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.