ಶಿವಮೊಗ್ಗ: ಅದು ರಾಷ್ಟ್ರೀಯ ಹೆದ್ಧಾರಿ. ಇಲ್ಲಿ ಸುಮಾರು 3 ದಿನಗಳಿಂದ ಕಾರೊಂದು ನಿಂತ ಜಾಗದಲ್ಲೇ ನಿಂತಿತ್ತು. ರಸ್ತೆ ಪಕ್ಕ ನಿಂತಿದ್ದ ಕಾರನ್ನ ಸ್ಥಳೀಯರು ದಿನವೂ ಗಮನಿಸುತ್ತಾ ಇದ್ದರು ಇದ್ದರು. ಆದರೆ, ಹತ್ತಿರ ಹೋಗಿ ನೋಡಿದಾಗಲೇ ಅಸಲಿ ವಿಷಯ ಬೆಳಕಿಗೆ ಬಂದಿದ್ದು. ನೋಡಿದ ಜನರಿಗೆ ಶಾಕ್ ಎದುರಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಂತಿದ್ದ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಮೊದಲು ರಸ್ತೆ ಪಕ್ಕದಲ್ಲಿ ನಿಂತಿದ್ದ ಕಾರೊಂದನ್ನು ಸ್ಥಳೀಯರು ದೂರದಿಂದ ಗಮನಿಸಿದ್ದಾರೆ. ಕಳೆದ ಮೂರು ದಿನಗಳಿಂದ ನಿಂತ ಜಾಗದಲ್ಲೇ ನಿಂತ ಕಾರನ್ನ ಸ್ಥಳಿಯರು ಹತ್ತಿರ ಹೋಗಿ ನೋಡಿದ್ದಾರೆ. ಆಗಲೇ ಅಸಲಿ ವಿಷಯ ಗೊತ್ತಾಗಿದೆ.
ಈ ಕಾರಿನಲ್ಲಿ ವ್ಯಕ್ತಿಯ ಶವ ಇರುವುದು ತಿಳಿದಿದ್ದು, ಕೂಡಲೇ, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಇನ್ನು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದಾಗ ಕಾರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಆಗಲೇ ಗೊತ್ತಾಗಿದ್ದು, ಈ ಶವ ಇದೇ ಕಾರಿನ ಚಾಲಕನದ್ದು ಅಂತಾ. ಶಿಕಾರಿಪುರದಿಂದ ಸಾಗರಕ್ಕೆ ಬಾಡಿಗೆ ಬಂದ ಮಾರುತಿ (36) ಎಂಬಾತ ತನ್ನದೇ ಕಾರಿನಲ್ಲಿ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ :ತಮ್ಮನ ಕೊಲೆಗೆ ಸುಪಾರಿ ನೀಡಿ, ಪಾಪ ತೊಳೆದುಕೊಳ್ಳಲು ಕುಂಭಮೇಳಕ್ಕೆ ಹೋದ ಅಣ್ಣ !
ಅಂದಹಾಗೇ, ಕಾರಿನ ಹಿಂಭಾಗದ ಸೀಟಿನಲ್ಲಿ ಕೂತ ಜಾಗದಲ್ಲೇ ಚಾಲಕ ಮಾರುತಿ ಶವ ಪತ್ತೆಯಾಗಿರುವುದು ಮತ್ತಷ್ಟು ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತಾಳಗುಂದ ಹೋಬಳಿಯ ಕಾಡೆತ್ತಿನಹಳ್ಳಿ ಬಿಳಿಕಿ ಗ್ರಾಮದ 34 ವರ್ಷದ ಮಾರುತಿ, ಅನೇಕ ವರ್ಷಗಳಿಂದ ಚಾಲಕ ವೃತ್ತಿ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಬಾಡಿಗೆಗೆ ಸಾಗರಕ್ಕೆ ಬಂದವನು, ತನ್ನದೇ ಸ್ವಂತ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ದೇಹವಾಗಿ ಪತ್ತೆಯಾಗಿದ್ದಾನೆ. ಈ ರೀತಿ ಸಾವಿನ ಬಗ್ಗೆ ಮೃತ ಚಾಲಕ ಮಾರುತಿ ಪೋಷಕರು, ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಾರೆ, ಈ ಕಾರಿನಲ್ಲಿ ಚಾಲಕ ಮಾರುತಿ ಸಾವು ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದು, ಬೇರೆ, ಬೇರೆ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಅಂದು ಕಾರಿನಲ್ಲಿ ಬಾಡಿಗೆಗೆ ಬಂದವರು ಯಾರು !? ಕಾರಿನಿಂದ ಇಳಿದು ಅವರು ಹೋಗಿದ್ದೆಲ್ಲಿಗೆ !? ಕಾರು ಚಾಲಕ ಹಿಂಬದಿ ಬಂದು ಕೂತಿದ್ದು ಏಕೆ ಈ ಎಲ್ಲದರ ಬಗ್ಗೆ ಪೊಲೀಸರ ತನಿಖೆ ಬಳಕವಷ್ಟೇ ಅಸಲಿಯತ್ತು ಹೊರಬೀಳಲಿದೆ.