ಕೊಪ್ಪಳ : KSRTC ಬಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿರುವ ಘಟನೆ ಕೊಪ್ಫಳದಲ್ಲಿ ನಡೆದಿದ್ದು. ಮೃತ ದುರ್ದೈವಿಯನ್ನು 28 ವರ್ಷದ ಮಂಜುನಾಥ್ ಹಂದ್ರಾಳ್ ಎಂದು ಗುರುತಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ, ಜೂರಟಗಿ ಬಳಿ ಘಟನೆ ನಡೆದಿದ್ದು. ಸಿದ್ದಾಪುರದಿಂದ ಕಾರಟಗಿಗೆ ತೆರಳುವ ಮಾರ್ಗ ಮದ್ಯದಲ್ಲಿ ಅಪಘಾತ ಸಂಭವಿಸಿದೆ. ಬಸ್ ಚಾಲಕನ ಅಚಾರ್ತುಯವೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದು. ಹಿಂಬದಿ ಸವಾರನಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಆಸ್ತಿಕತೆ, ನಾಸ್ತಿಕತೆ ಎಲ್ಲವನ್ನು ಗೌರವಿಸಬೇಕು : ಡಾಲಿ ಧನಂಜಯ್
ಮೃತರನ್ನು ಸಿದ್ದಪುರ ಗ್ರಾಮದ ಮಂಜನಾಥ ಹಂದ್ರಾಳ (28) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಖಾಸಿಂಸಾಬ್ರ್ ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ