Sunday, February 23, 2025

ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಡಾಲಿ ಧನಂಜಯ್-ಡಾಕ್ಟರ್​ ಧನ್ಯತಾ

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್ ಮತ್ತು ಡಾಕ್ಟರ್​ ಧನ್ಯತಾ ಸಪ್ತಪದಿ ತುಳಿದಿದ್ದಾರೆ. ಬೆಳಿಗ್ಗೆ 9:10 ರಿಂದ 10:10ರ ವರೆಗಿನ, ಸಂಕಷ್ಟ ಚತುರ್ದರ್ಶಿಯ ಶುಭ ಲಗ್ನದಲ್ಲಿ ಡಾಲಿ,ಧನ್ಯ ಅದ್ದೂರಿಯಾಗಿ ವಿವಾಹವಾಗಿದ್ದಾರೆ.

ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಡಾಲಿ, ಧನ್ಯತಾ ಇಬ್ಬರು ನವ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ ಬೆಳಗ್ಗೆಯಿಂದಲೇ ಧಾರಾ ಮುಹೂರ್ತದ ದಿನದ ಶಾಸ್ತ್ರಗಳು ಆರಂಭವಾದವು. ಮೊದಲು ಮಂಟಪಕ್ಕೆ ದೇವತಾ ಪ್ರವೇಶ ನಂತರ ನವ ಪ್ರಧಾನ ಕಳಸ ಪೂಜೆ, ಕನ್ಯಾದಾನ, ಸಂಬಂಧ ಮಾಲೆ ಅರ್ಪಣೆ ಶಾಸ್ತ್ರ ನೆರವೇರಿತು. ಲಿಂಗಾಯತ ಸಂಪ್ರದಾಯದಂತೆ ಅರಸೀಕೆರೆಯ ಕಾಳೇನಹಳ್ಳಿ ಹುಡುಗ ಚಿತ್ರದುರ್ಗದ ಶಿವಪುರದ ಹುಡುಗಿಯ ಜೊತೆ ಕಲ್ಯಾಣವಾಗಿದ್ದಾರೆ.

ಇದನ್ನೂ ಓದಿ :ದೆಹಲಿ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ: 18 ಮಂದಿ ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ

ನಿನ್ನೆ ತಡರಾತ್ರಿ 11 ಗಂಟೆಯವರೆಗೂ ಆರತಕ್ಷತೆ ನೆರವೇರಿದ್ದು. ಸಾಕಷ್ಟು ಜನ ರಾಜಕೀಯ ಗಣ್ಯರು, ಸಿನಿಮಾ ಗಣ್ಯರು ಆಗಮಿಸಿ ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ. ಇಂದು ಸಹ ಅನೇಕ ಗಣ್ಯರು ಭಾಗವಹಿಸಿ ಆರ್ಶೀವಾದಿಸಿದ್ದಾರೆ.

RELATED ARTICLES

Related Articles

TRENDING ARTICLES