ಜಪಾನಿನಲ್ಲಿರುವ ಮೃಗಾಲಯವೊಂದಕ್ಕೆ ಒಂಟಿಯಾಗಿ ಬರುವ ಪುರಷರಿಗೆ ಪ್ರವೇಶವನ್ನು ನಿರಾಕರಿಸಿದ್ದಾರೆ. ಇದಕ್ಕೆ ಕಾರಣ ತಿಳಿದರೆ ಕೆಲವು ಕ್ಷಣ ನೀವು ಕೂಡ ಆಶ್ಚರ್ಯ ಚಕಿತರಾಗುತ್ತೀರ. ಏಕೆ ಈ ಮೃಗಾಲಯಕ್ಕೆ ಪ್ರವೇಶವನ್ನು ನಿರಾಕರಿಸಲಾಗುತ್ತಿದೆ. ಒಂಟಿಯಾಗಿ ಬರುವ ಪುರುಷರಿಂದ ಆಗುತ್ತಿರುವ ಕಿರುಕುಳವಾದರೂ ಏನು ಎಂಬ ಕುತುಹಲವಿದ್ದರೆ ವರದಿಯನ್ನು ಓದಿ.
ಪೂರ್ವ ಜಪಾನ್‌ನ ಟೋಚಿಗಿ ಪ್ರಿಫೆಕ್ಚರ್‌ನಲ್ಲಿರುವ ಹೀಲಿಂಗ್ ಪೆವಿಲಿಯನ್ ಎಂಬ ಮೃಗಾಲಯವು ಪುರುಷರಿಗೆ ಈ ನಿಷೇಧವನ್ನು ವಿಧಿಸಿದೆ. ಮೃಗಾಲಯದಲ್ಲಿ ಪ್ರಾಣಿಗಳೊಂದಿಗೆ ಸಂವಹನ ನಡೆಸಲು, ಅವುಗಳಿಗೆ ಆಹಾರ ನೀಡಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಆದ್ದರಿಂದ ಈ ಮೃಗಾಲಯಕ್ಕೆ ಪ್ರವಾಸಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಇಲ್ಲಿಗೆ ಒಂಟಿಯಾಗಿ ಬರುವ ಪುರುಷರಿಂದ ಮೃಗಾಲಯದ ಮಹಿಳಾ ಸಿಬ್ಬಂದಿಗೆ ಕೆಟ್ಟ ಅನುಭವವಾಗುತ್ತಿರುವ ಕಾರಣ ಮೃಗಾಲಯದ ಆಡಳಿತ ಮಂಡಳಿ ಈ ಧೃಡ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ :ವರದಕ್ಷಿಣೆಯಾಗಿ ದೊಡ್ಡ ಕಾರು ಕೊಡಲಿಲ್ಲ ಎಂದು ಸೊಸೆಗೆ ಏಡ್ಸ್ ಸೋಂಕಿತ ಸೂಜಿ ಚುಚ್ಚಿದ ಅತ್ತೆ
ಕಳೆದ 2024ರ ಮಾರ್ಚ್‌ನಲ್ಲಿ ಈ ಮೃಗಾಲಯವು ಕಾರ್ಯಾರಂಭ ಮಾಡಿತು. ಈ ಮೃಗಾಲಯದಲ್ಲಿ ಪ್ರಾಣಿಗಳೊಂದಿಗೆ ಪ್ರವಾಸಿಗರು ಸಮಯ ಕಳೆಯುವುದರಿಂದ ಅವರ ಮಾನಸಿಕ ಆರೋಗ್ಯವು ಹೆಚ್ಚಿಸಲಾಗುತ್ತಿತ್ತು. ಆದರೆ 2025ರ ಜನವರಿ 26 ರಂದು ಮೃಗಾಲಯದ ನಿರ್ದೇಶಕಿ ಮಿಸಾ ಮಾಮಾ ಅವರು ಒಬ್ಬಂಟಿ ಪುರುಷ ಸಂದರ್ಶಕರಿಗೆ ನಿರ್ಬಂಧವನ್ನು ವಿಧಿಸುವ ಪ್ರಕಟಣೆಯನ್ನು ಹೊರಡಿಸಿದರು.
ಪುರುಷ ಸಂದರ್ಶಕರು ಒಂಟಿಯಾಗಿ ಮೃಗಾಲಯಕ್ಕೆ ಬರುವುದನ್ನು ನಿಷೇಧಿಸಲಾಗಿದೆ ಎಂದು ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಇದನ್ನು ಸೂಚಿಸುವ ನೋಟಿಸ್ ಅನ್ನು ಮೃಗಾಲಯದ ಪ್ರವೇಶ ದ್ವಾರದಲ್ಲಿಯೂ ಅಂಟಿಸಲಾಗಿದೆ.
ಇದರ ಪ್ರಕಾರ ಮೃಗಾಲಯದ ಆರಂಭದಲ್ಲಿ ಹೆಚ್ಚಿನ ಪ್ರವಾಸಿಗರು ಕುಟುಂಬಗಳು ಮತ್ತು ದಂಪತಿಗಳು ಬರುತ್ತಿದ್ದರು. ಆದರೆ, ಇತ್ತೀಚೆಗೆ ಒಂಟಿ ಪುರುಷ ಸಂದರ್ಶಕರು ಹೆಚ್ಚಾಗಿದ್ದು, ಅವರು ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ಈ ಕಠಿಣ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೃಗಾಲಯದ ನಿರ್ದೇಶಕಿ ತಿಳಿಸಿದ್ದಾರೆ.