Thursday, April 3, 2025

ಕಾಂಗ್ರೆಸ್​ನಲ್ಲಿ ದಲಿತರನ್ನ ಸಿಎಂ ಮಾಡಿದ್ರೆ ಬಹಳ ಸಂತೋಷ: ಪ್ರಹ್ಲಾದ್​ ಜೋಶಿ

ಹುಬ್ಬಳ್ಳಿ : ಕಾಂಗ್ರೆಸ್​ನಲ್ಲಿ ಎದ್ದಿರುವ ದಲಿತ ಸಿಎಂ ವಿಚಾರದ ಕುರಿತಿ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಹೇಳಿಕೆ ನೀಡಿದ್ದು. ದಲಿತರನ್ನು ಸಿಎಂ ಮಾಡಿದ್ರೆ ಬಹಳ ಸಂತೋಷ. ಆದರೆ ಇದನ್ನು ಹಾದಿ ಬೀದಿ ರಂಪ ಮಾಡಬಾರದು ಎಂದು ಹೇಳಿದರು.

ಕಾಂಗ್ರೆಸ್​ನಲ್ಲಿ ಸಿಎಂ ಬದಲಾವನೆ ಕೂಗು ಕೇಳಿ ಬರುತ್ತಿದೆ. ಶಥಾಯ ಗತಾಯ ಡಿಕೆಶಿ ಈ ವರ್ಷದ ಅಂತ್ಯಕ್ಕೆ ಸಿಎಂ ಆಗಬೇಕು ಎಂಬ ಇಚ್ಚೆಯನ್ನು ಹೊಂದಿದ್ದಾರೆ. ಆದರೆ ಇದಕ್ಕೆ ದಲಿತ ಸಚಿವರುಗಳು ಅಡ್ಡಿಯಾಗಿದ್ದು. ದಲಿತ ಸಮಾವೇಶ ಮಾಡಿ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ. ಈ ಕುರಿತಿ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದು. ‘ ಕಾಂಗ್ರೆಸ್​ನಲ್ಲಿ ಬಹಳ ಗೊಂದಲ ಇದೆ. ಇರುವ ಈ ರಾಜ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಮ್ಯಾನೇಜ್​ ಮಾಡುತ್ತಿದ್ದಾರೆ.

ಇದನ್ನೂ ಓದಿ : ಮೈಸೂರು ಗಲಭೆಗೆ ದೊಡ್ಡ ಮಟ್ಟದ ಪ್ರಚಾರ ಕೊಡೊದು ಬೇಡ: ಕುಮಾರಸ್ವಾಮಿ

ದಲಿತ ಸಿಎಂ ಆಗಲಿ. ಆದರೆ ನಮಗೂ ಸಂತೋಷವಾಗುತ್ತೆ. ಕೆಲವರು ಅಧಿಕಾರ ಹಂಚಿಕೆ ಬಗ್ಗೆಯೂ ಮಾತನಾಡುತ್ತಿದ್ದಾರೆ. ರಾಹುಲ್​ ಗಾಂಧಿ ಸೀರಿಯಸ್​ ರಾಜಕಾರಣಿ ಅಲ್ಲ. ಅವರು ಇಲ್ಲಿ ಪ್ರತಿಭಟನೆ ಮಾಡುತ್ತಾರೆ, ನಂತರ ವಿದೇಶಕ್ಕೆ ಹೋಗುತ್ತಾರೆ. ಅದಾನಿ ಅಂಬಾನಿ ವಿಷಯ ಮಾತಾಡ್ತಾ ಇದ್ದಾರೆ. ಅದಕ್ಕೂ ಅರ್ಥ ಬೇಕಲ್ವಾ ಎಂದು ಹೇಳಿದರು.

RELATED ARTICLES

Related Articles

TRENDING ARTICLES