ಮೈಸೂರು: ನಟ ಡಾಲಿ ಧನಂಜಯ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ದು. ಆ್ಯಕ್ಟರ್ ಧನಂಜಯ್ ಮತ್ತು ಡಾಕ್ಟರ್ ಧನ್ಯತಾ ಇಬ್ಬರು ಹಳದಿ ಶಾಸ್ತ್ರದಲ್ಲಿ ಮಿಂದೆದ್ದಾರೆ. ಇಂದು ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ಆರತಕ್ಷತೆ ನಡೆಯಲಿದ್ದು. ನಾಳೆ ಬೆಳಿಗ್ಗೆ 8:20 ರಿಂದ 10:00 ವರೆಗೆ ನಡೆಯುವ ಶುಭ ಮೂಹರ್ತದಲ್ಲಿ ಮದುವೆ ನೆರೆವೇರಲಿದೆ.
ಕಳೆದ ಎರಡು ತಿಂಗಳಿಂದ ಸ್ಯಾಂಡಲ್ವುಡ್ನಲ್ಲಿ ನಟ ಡಾಲಿ ಧನಂಜಯ್ ಮದುವೆ ವಿಷಯ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಗಣ್ಯರಿಗೆ ಇನ್ವೀಟೇಶನ್ ನೀಡುವುದರಿಂದ ಹಿಡಿದು ಪ್ರತಿಯೊಂದರಲ್ಲಿಯೂ ಡಾಲಿ ಧನಂಜಯ್ ಮುತುವರ್ಜಿ ವಹಿಸಿ ಕೆಲಸ ನಿರ್ವಹಿಸಿದ್ದಾರೆ.
ಇದನ್ನೂ ಓದಿ :ಕುಂಭಮೇಳಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ: 10 ಮಂದಿ ಸಾ*ವು
ನಟನ ಹಳದಿ ಶಾಸ್ತ್ರ ಸಮಾರಂಭಕ್ಕೆ ಹಿರಿಯ ನಟ, ಮಾಜಿ ಸಚಿವ ಬಿ.ಸಿ.ಪಾಟೀಲ್ ಮತ್ತು ಕುಟುಂಬದವರು ಆಗಮಿಸಿ ಶುಭಕೋರಿದ್ದಾರೆ. ಜೊತೆಗೆ ಕುಟುಂಬದ ಆಪ್ತರು ಮತ್ತು ಸ್ನೇಹಿತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದ್ದಾರೆ. ಇಂದು ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ನಟ ಮತ್ತು ಡಾಕ್ಟರ್ ಜೋಡಿ ಆರತಕ್ಷತೆ ನಡೆಯಲಿದೆ. ಇಂದು ಬೆಳಗ್ಗೆಯಿಂದಲೇ ಶಾಸ್ತ್ರಗಳು ನಡೆಯಲಿವೆ. ಸಂಜೆ 6 ಗಂಟೆಯ ನಂತರ ಆರತಕ್ಷತೆ ಕಾರ್ಯಕ್ರಮ ಇರಲಿದೆ. ನಾಳೆ ಬೆಳಿಗ್ಗೆ ಧಾರಾ ಮುಹೂರ್ತ ನೆರವೇರಲಿದೆ.