ಇತ್ತೀಚಿಗಷ್ಟೇ ಛತ್ತೀಸ್‌ಗಢದ ದೇವಾಲಯವೊಂದರಲ್ಲಿ ಕರಡಿಯೊಂದು ಶಿವಲಿಂಗವನ್ನು ಅಪ್ಪಿಕೊಂಡು ಕುಳಿತಿರುವಂತಹ ದೃಶ್ಯಾವಳಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ನಾಗರ ಹಾವೊಂದು ಶಿವಲಿಂಗದ ಮೇಲೇರಿ ಶಿವಲಿಂಗಕ್ಕೆ ಸುತ್ತು ಹಾಕಿ ಹೆಡೆ ಎತ್ತಿ ಕೂತು ಜನರಿಗೆ ದರ್ಶನವನ್ನು ನೀಡುತ್ತಿರುವ ದೃಶ್ಯಾವಳಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ ನೋಡಿ.
ನಾಗಪ್ಪನಿಗೂ ಶಿವಪ್ಪನಿಗೂ ಅವಿನಾಭಾವ ಸಂಬಂಧ. ಗಂಗೆ ಜಠೆ ಏರಿ ಕೂತಿದ್ದರೆ, ನಾಗಪ್ಪ ಶಿವಪ್ಪನ ಕೊರಳನ್ನೇರಿ ಕೂತಿರುತ್ತಾನೆ. ಇದೀಗ ದೇವಾಲಯವೊಂದರಲ್ಲಿ ಮಾಘ ಪೂರ್ಣಿಮೆಯ ದಿನ ಶಿವಲಿಂಗದ ಮೇಲೆ ನಾಗಪ್ಪ ಪ್ರತ್ಯಕ್ಷನಾಗಿದ್ದು, ಶಿವಲಿಂಗಕ್ಕೆ ಸುತ್ತು ಹಾಕಿ ಹೆಡೆ ಬಿಚ್ಚಿ ಕೂತಿದ್ದಾನೆ ನೋಡಿ.
ಇದನ್ನೂ ಓದಿ :ಹಸುವಿನ ತೂಕ 1101ಕೆ.ಜಿ, ಬೆಲೆ ಬರೋಬ್ಬರಿ 40 ಕೋಟಿ: ವಿಶ್ವದಾಖಲೆ ನಿರ್ಮಿಸಿದ ನೆಲ್ಲೂರು ತಳಿ
శివలింగానికి నాగాభరణం
వైజాగ్ చంద్రబాబునాయుడు కాలనీలో ఉన్న శివాలయంలోకి నాగుపాము ప్రవేశించి శివలింగాన్ని ఆభరణంలా చుట్టేసింది.
చాలాసేపు పడగ విప్పి అలాగే దర్శనమిచ్చింది. ఆలయంలో ఉన్న భక్తులు ఇది శివలీలేనంటూ భక్తి పారవశ్యంలో మునిగిపోయారు. pic.twitter.com/fJ2iOBoesP
— greatandhra (@greatandhranews) February 12, 2025
ಆಂಧ್ರ ಪ್ರದೇಶದ ವಿಶಾಖಪಟ್ಟಣದ ದೇವಾಲಯವೊಂದರಲ್ಲಿ ಈ ಅಪರೂಪದ ಘಟನೆ ಸಂಭವಿಸಿದ್ದು, ಶಿವಲಿಂಗವನ್ನು ಸುತ್ತಿಕೊಂಡು ಹೆಡೆ ಬಿಚ್ಚಿ ಕುಳಿತ ನಾಗರ ಹಾವು ಯಾರಿಗೂ ಯಾವೂದೆ ರೀತಿಯ ತೊಂದರೆ ನೀಡದೆ ದರ್ಶನ ನೀಡಿದೆ. ಸಾಮಾನ್ಯವಾಗಿ ಹಾವು ಜನರನ್ನು ಕಂಡರೆ ಅಲ್ಲಿಂದ ಓಡಿ ಹೋಗುವ ಪ್ರಯತ್ನ ಮಾಡುತ್ತದೆ. ಆದರೆ ಈ ಹಾವು ಮಾತ್ರ ಭಯಪಡದೆ ತೊಂದರೆಯನ್ನು ನೀಡದೆ ಶಿವಲಿಂಗದಲ್ಲಿ ಹೆಡೆ ಬಿಚ್ಚಿ ಕೂತಿರುವ ಈ ದೃಶ್ಯಾವಳಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.