ಮೈಸೂರು : ನಟ ಡಾಲಿ ಧನಂಜಯ್ ಮದುವೆ ಅರಮನೆ ನಗರಿ ಮೈಸೂರಿನಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಈ ಅದ್ದೂರಿ ಮದುವೆಗೆ ನಿದೇಶಕ ಅರುಣ್ ಸಾಗರ್ ಸೆಟ್ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ್ದು. ಅದ್ದೂರಿಯಾದ ಎರಡು ಸೆಟ್ಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಕುರಿತು ಅರುಣ್ ಸಾಗರ್ ಪವರ್ ಟಿವಿ ಜೊತೆಗೆ ಎಕ್ಷ್ಕ್ಲೂಸಿವ್ ಆಗಿ ಮಾತನಾಡಿದ್ದಾರೆ.
ಪವರ್ ಟಿವಿ ಜೊತೆಯಲ್ಲಿ ಮಾತನಾಡಿದ ಅರುಣ್ ಸಾಗರ್ ‘ ಈ ಅದ್ದೂರಿ ಸೆಟ್ ನಿರ್ಮಾಣವನ್ನು ನಾನು ಮತ್ತು ಧೃವ ಇಬ್ಬರು ಸೇರಿಕೊಂಡು ಮಾಡಿದ್ದೇವೆ. ಈ ಸೆಟ್ ನಿರ್ಮಾಣದಲ್ಲಿ 800ಕ್ಕೂ ಹೆಚ್ಚು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೂ ಮಾರುವವರಿಂದ , ಕಸ ಗುಡಿಸುವವರು ಪ್ರತಿಯೊಬ್ಬರು ಇದರಿಂದ ಕೆಲಸ ಪಡೆದಿದ್ದಾರೆ. ಮದುವೆ ಎಂಬುದು ಇಂದು ಉದ್ಯಮವಾಗಿ ಪರಿವರ್ತನೆಯಾಗಿದೆ. ಈ ಮದುವೆ ಸಾವಿರಾರು ಜನರಿಗೆ ಊಟ ನೀಡುತ್ತದೆ ಎಂದು ಹೇಳಿದರು.
ಇದನ್ನೂ ಓದಿ :ಮುಂದಿನ ಚುನಾವಣೆ ಗೆಲ್ಲಬೇಕಾದರೆ ಸಿದ್ದರಾಮಯ್ಯ ರಾಜಕೀಯದಲ್ಲಿರಬೇಕು: ಸತೀಶ್ ಜಾರಕಿಹೋಳಿ
ಬಡವ ರಾಸ್ಕಲ್ ಮದುವೆ ಶ್ರೀಮಂತವಾಗಿ ನಡೆಯುತ್ತಿದೆ !
ಧನಂಜಯ್ ಕುರಿತು ಮಾತನಾಡಿದ ಅರುಣ್ ಸಾಗರ್ ‘ ಧನಂಜಯ್ ಮದುವೆ ಅದ್ದೂರಿಯಾಗಿ ನಡೆಯುತ್ತಿದೆ. ನಮ್ಮಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಅರುಣ್ಣಣ್ಣ ಬಡವ ರಾಸ್ಕಲ್ ಮದುವೆ ಅದ್ದೂರಿಯಾಗಿ ನಡೆಯುತ್ತಿದೆ ಎಂದ. ಬಡವನ ಕನಸು ಶ್ರೀಮಂತವಾಗುತ್ತಿದೆ. ಧನಂಜಯ್ರನ್ನು ರಂಗಯಾಣದಿಂದ ನಾನು ನೋಡುತ್ತಿದ್ದೇನೆ, ಸಿನಿ ರಂಗದಲ್ಲಿ ಧನಂಜಯ್ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾನೆ.
ಅವನೊಬ್ಬ ಸಹೃದಯಯದ ಯುವಕ, ಸಿನಿರಂಗದಲ್ಲಿ ಆತ ಸಾಕಷ್ಟು ಪರಿಶ್ರಮ ಪಟ್ಟು ಬೆಳೆದಿದ್ದಾನೆ. ಸಿನಿ ರಂಗಕ್ಕೆ ಬಂದ ಕೆಲ ದಿನಗಳಲ್ಲೆ ಅವನು ಪ್ರೊಡೆಕ್ಷನ್ ನಿರ್ಮಿಸಿದ್ದಾನೆ. ಸಮಾಜಕ್ಕೆ ಏನನ್ನು ಕೊಡಬೇಕು ಎಂದು ಆತನಿಗೆ ತಿಳಿದಿದೆ. ಜೊತೆಗೆ ಆತನ ಸ್ನೇಹಿತರು ಬಳಗವು ಈಗೆ ಇದೆ. ಬಹಳ ಒಳ್ಳೆಯ ಸ್ನೇಹಿತರನ್ನು ಹೊಂದಿದ್ದಾನೆ ಎಂದು ಹೇಳಿದರು.