Thursday, April 3, 2025

ಮದುವೆ ಮನೆಗೆ ಎಂಟ್ರಿ ಕೊಟ್ಟ ಚಿರತೆ, ವಧು ವರರು ಕಂಗಾಲು

ಮದುವೆ ಮನೆ ಅಂದರೆ ವದು ವರರ ಸಂಬಂಧಿಕರು, ಹಿತೈಷಿಗಳು ಇವರೆಲ್ಲ ಬರೋದು ಸಹಜ. ಬಂಧು ಬಳಗವೆಲ್ಲ ಮದುವೆ ಸಂಭ್ರಮದಲ್ಲಿ ಸಂಭ್ರಮಿಸೋದು ಸಾಮಾನ್ಯ. ಆದರೆ ಇದೀಗ ಮದುವೆ ಮನೆಯೊಳಗಡೆ ಚಿರತೆಯೊಂದು ಬಂದು ದಾಂಧಲೆ ಎಬ್ಬಿಸಿರುವ ದೃಶ್ಯಾವಳಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಚಿರತೆ ಹುಡುಗಿ ಕಡೆ ಬಂಧುನ ಹುಡುಗನ ಕಡೆ ಬಂಧುನ ಎಂಬುದೆ ಇಲ್ಲಿ ಫುಲ್ ಕನ್ಪ್ಯೂಸ್​​ ಕಣ್ರೀ..

ಉತ್ತರ ಪ್ರದೇಶದ ಲಕ್ನೋದ ಬುದ್ದೇಶ್ವರ ಪ್ರದೇಶಲ್ಲಿ ಮದುವೆ ಕಾರ್ಯಕ್ರಮವೊಂದು ಅದ್ದೂರಿಯಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ಚಿರತೆಯೊಂದು ಮದುವೆ ಮನೆಗೆ ಏಕಾಏಕಿ ನುಗ್ಗಿ ಮದುವೆ ಮನೆಯನ್ನೆ ಅಲ್ಲೋಲ ಕಲ್ಲೊಲವನ್ನಾಗಿಸಿದೆ. ಇತ್ತೀಚಿನ ದಿನಗಳಲ್ಲಿ ಈ ಕಾಡು ಪ್ರಾಣಿಗಳ ಉಪಟಳಕ್ಕೆ ಸಾರ್ವಜನಿಕರು ಹೈರಣಾಗಿದ್ದಾರೆ.

ಇದನ್ನೂ ಓದಿ :‘ಡಾಬಾ ಬಂತು ಊಟ ಮಾಡ್ತೀಯ’ ಎಂದಿದ್ದಕ್ಕೆ ಬದುಕಿ ಬಂದಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾ*ವು

ಯಾವಾಗ ಯಾವ ಸಂದರ್ಭದಲ್ಲಿ ಈ ಕಾಡು ಪ್ರಾಣಿಗಳು ಊರೊಳಗಡೆ ನುಗ್ಗಿ ತಮ್ಮ ಪ್ರಾಣಕ್ಕೆ ಸಂಚಕಾರವನ್ನು ತಂದೊಡ್ಡುತ್ತದೆ ಎಂದು ಪ್ರಾಣ ಭಯದಿಂದಲೆ ಅರಣ್ಯ ಪ್ರದೇಶದ ಜನರು ದಿನ ಕಳೆಯುತ್ತಿದ್ದಾರೆ. ಇದೀಗ ಮದುವೆ ಮನೆಯೊಳಗಡೆ ಕೂಡ ಚಿರತೆಯೊಂದು ಎಂಟ್ರಿ ಕೊಟ್ಟು ಜನರಲ್ಲಿ ಭಯವನ್ನುಂಟು ಮಾಡಿದೆ ಅಂದರೆ ಇದು ಯೋಚಿಸ ಬೇಕಾದದ್ದೆ ಅಲ್ವಾ..?

ಮದುವೆ ಮನೆಯೊಳಗಡೆ ಚಿರತೆ ಬಂದಿದ್ದೆ ತಡ ತಮ್ಮ ಜೀವ ಉಳಿಸಿಕೊಳ್ಳುವುದಕ್ಕೆ ಮದುವೆ ಮನೆಯಲ್ಲಿದ್ದವರೆಲ್ಲ ಅಲ್ಲಿಂದ ಓಡಿ ಹೋಗಿ ತಮ್ಮ ತಮ್ಮ ವಾಹನದೊಳಗಡೆ ಕೂತಿದ್ದಾರಂತೆ. ತಕ್ಷಣ ಅರಣ್ಯ ಇಲಾಖೆಗೆ ವಿಷಯ ತಿಳಿಸಲಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಸುಮಾರು ಎರಡು ಗಂಟೆಗಳ ಕಾರ್ಯಾಚರಣೆ ನಂತರ ಮದುವೆ ಮನೆಯೊಳಗಡೆ ಅವಿತು ಕೂತಿದ್ದ ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ..

RELATED ARTICLES

Related Articles

TRENDING ARTICLES