ಬೆಳಗಾವಿ : ಕ್ಷುಲ್ಲಕ ಕಾರಣಕ್ಕೆ ಮಾಜಿ ಶಾಸಕನ ಮೇಲೆ ಆಟೋ ಚಾಲಕನಿಂದ ಮಾರಣಾಂತಿಕ ಹಲ್ಲೆ ನಡೆದಿದ್ದು. ಈ ಮಾರಣಾಂತಿಕ ಹಲ್ಲೆಯಲ್ಲಿ ಗೋವಾದ ಮಾಜಿ ಶಾಸಕ ಲಾವೋ ಮಾಮಲೇದಾರ್ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗಾವಿಯ ಶ್ರೀನಿವಾಸ ಲಾಡ್ಜ್ ಎದುರು ಘಟನೆ ನಡೆದಿದೆ. ಗೋವಾದ ಪೋಂಡಾ ಕ್ಷೇತ್ರದ ಶಾಸಕರಾಗಿದ್ದ ಲಾವೋ ಮಾಮಲೇದಾರ ಖಡೇಬಜಾರ್ ಬಳಿ ಅವರ ಕಾರು, ಆಟೋವೊಂದಕ್ಕೆ ಟಚ್ ಆಗಿತ್ತು.ಅವರು ಅಲ್ಲಿಂದ ಶ್ರೀ ನಿವಾಸ್ ಲಾಡ್ಜ್ಗೆ ಹಿಂದಿರುಗಿದ್ದರು.
ಇದನ್ನೂ ಓದಿ :ಕುರುಬೂರು ಶಾಂತಕುಮಾರ್ಗೆ ಪಂಜಾಬ್ನಲ್ಲಿ ಅಪಘಾತ: ಏರ್ಲಿಫ್ಟ್ ವ್ಯವಸ್ಥೆ ಮಾಡಿದ ಸೋಮಣ್ಣ
ಈ ವೇಳೆ ಲಾಡ್ಜ್ ಬಳಿಗೆ ಬಂದ ಆಟೋ ಚಾಲಕ ಮಾಜಿ ಶಾಸಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಲಾವೋ ಮಾಮಲೇದಾರ್ ಸ್ಥಳದಲ್ಲೆ ಸಾವನ್ನಪ್ಪಿದ್ದು. ಮೃತ ದೇಹವನ್ನು ಬೆಳಗಾವಿಯ ಬ್ರಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸಂಬಂದ ಬೆಳಗಾವಿ ಮಾರ್ಕೆಟ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.