ಹಾಸನ : ಮೈಸೂರು ಗಲಭೆ ಪ್ರಕರಣದ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ ನೀಡಿದ್ದು. ಮೈಸೂರಿನಲ್ಲಿ ನಡೆದಿರುವ ಘಟನೆಗೆ ದೊಡ್ಡ ಮಟ್ಟದ ಪ್ರಚಾರ ಕೊಡೊದು ಬೇಡ. ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ ಎಂದು ಹೇಳಿದರು.
ಸಕಲೇಶಪುರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದು. ‘ಮೈಸೂರು ಗಲಭೆ ಬಗ್ಗೆ ದೊಡ್ಡಮಟ್ಟದಲ್ಲಿ ಪ್ರಚಾರ ಕೊಡುವುದು ಬೇಡ, ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಒಂದು ಸಮಾಜದವರು ಸೋಶಿಯಲ್ ಮಿಡೀಯಾದಲ್ಲಿ ಪೋಸ್ಟ್ ಮಾಡಿದ್ದರಿಂದ ಇನ್ನೊಂದು ಸಮಾಜದವರು ಸರ್ಕಾರಿ ವಾಹನಗಳ ಕಲ್ಲು ತೂರಾಟ ಮಾಡಲು ಹೊರಟಿದ್ದರು. ಅಶಾಂತಿ ವಾತಾವರಣ ನಿರ್ಮಾಣ ಮಾಡಲು ಮುಂದಾಗಿದ್ದರು.
ಅದರ ಹಿನ್ನೆಲೆಯಲ್ಲಿ ಈಗ ರಾಜಕೀಯ ಪ್ರಾರಂಭವಾಗಿದೆ.ಆದರೆ ಇವುಗಳ ಮಧ್ಯ ರಾಜ್ಯ ಯಾವ ಪರಿಸ್ಥಿತಿಗೆ ಹೋಗುತ್ತಿದೆ ಎಂಬ ಬಗ್ಗೆ ಗಮನ ಕೊಡುವುದು ಸೂಕ್ತ ಎಂದು ಹೇಳಿದರು.
ಇದನ್ನೂ ಓದಿ :ಪ್ರೀತ್ಸೆ ಪ್ರೀತ್ಸೆ ಎಂದು ಪ್ರಿಯತಮೆಗೆ ಮೂರು ಬಾರಿ ಗರ್ಭಪಾತ ಮಾಡಿಸಿದ ಭೂಪ
ರಾಜ್ಯ ಸರ್ಕಾರದ ತೆರಿಗೆ ಸಂಗ್ರಹ 1 ಲಕ್ಷದ 89 ಸಾವಿರ ಕೋಟಿ ನಿರೀಕ್ಷೆ ಇಟ್ಟಿದ್ದರು. ಆದರೆ ಅದಕ್ಕೆ ಇನ್ನೂ 15 ಸಾವಿರ ಕೋಟಿ ಕೊರತೆ ಆಗಬಹುದು. ಆ ಹಣ ತುಂಬಿಸಲು ಸಿಎಲ್-2, ಸಿಎಲ್-7, ಸಿಲ್-9 ಐನೂರು ಮದ್ಯದಂಗಡಿಗಳಿಗೆ ಅನುಮತಿ ಕೊಡಲು ಮುಂದಾಗಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದಾರೆ. ಎಲ್ಲಾ ರೀತಿಯ ದರಗಳನ್ನು ಏರಿಕೆ ಮಾಡಿದ್ದಾರೆ. ಯಾವುದೇ ರೀತಿಯ ಸಂಗ್ರಹದಲ್ಲಿ ಯಶಸ್ಸು ಕಂಡಿಲ್ಲ. ರಾಜ್ಯದಲ್ಲಿರುವ ಸಮಸ್ಯೆಗಳಿಗಿಂತ ಕ್ಷುಲ್ಲಕ ರಾಜಕೀಯ ಬೆಳವಣಿಗೆಗೆ ಪ್ರಾಶಸ್ತ್ಯ ಕೊಡುತ್ತಿದ್ದಾರೆ ಎಂದು ಹೇಳಿದರು.