Wednesday, April 2, 2025

ಹಸುವಿನ ತೂಕ 1101ಕೆ.ಜಿ, ಬೆಲೆ ಬರೋಬ್ಬರಿ 40 ಕೋಟಿ: ವಿಶ್ವದಾಖಲೆ ನಿರ್ಮಿಸಿದ ನೆಲ್ಲೂರು ತಳಿ

ಅಬ್ಬಬ್ಬಾ ಅಂದರೆ ಒಂದು ಹಸುವಿನ ಬೆಲೆ 20 ಸಾವಿರದಿಂದ 50 ಸಾವಿರದವರೆಗೆ ಇರಬಹುದು ಅಲ್ವಾ. ಆದ್ರೆ ಇಲ್ಲೊಂದು ಹಸುವಿನ ಬೆಲೆ ಕೇಳಿದರೆ ನೀವು ಬೆಚ್ಚಿ ಬಿಳ್ತೀರಾ. ಹಸುವಿಗೂ ಇಷ್ಟೊಂದು ಬೆಲೆ ಇದೆಯಾ ಅಂತ ಆಶ್ಚರ್ಯ ಆಗದೆ ಇರದು. ಹೌದು ಆಂಧ್ರ ಪ್ರದೇಶದ ನೆಲ್ಲೂರು ತಳಿಯ ಹಸುವೊಂದು ಬ್ರೆಜಿಲ್​ನಲ್ಲಿ ನಡೆದ ಹರಾಜಿನಲ್ಲಿ ಬರೋಬ್ಬರಿ 40 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಸಾಮಾನ್ಯ ಹಸುವೊಂದು ಇಷ್ಟೊಂದು ರೇಟ್​ಗೆ ಮಾರಾಟವಾಗುವ ಮೂಲಕ ವಿಶ್ವ ದಾಖಲೆಯನ್ನು ಬರೆದಿದೆ ಅಂದರೆ ಆಶ್ಚರ್ಯ ಆಗದೆ ಇರುತ್ತದ ಹೇಳಿ.

ಹೌದು ಭಾರತ ಮೂಲದ ನೆಲ್ಲೂರು ತಳಿಯ ಹಸು ಬರೋಬ್ಬರಿ 40 ಕೋಟಿ ರೂ. ಗಳಿಗೆ ಮಾರಾಟವಾಗುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಬ್ರೆಜಿಲ್‌ನಲ್ಲಿ ನಡೆದ ಹರಾಜಿನಲ್ಲಿ ನೆಲ್ಲೂರು ತಳಿಯ ಹಸು ದುಬಾರಿ ದರಕ್ಕೆ ಮಾರಾಟವಾಗುವ ಮೂಲಕ ಜಗತ್ತಿನ ದುಬಾರಿ ಹಸು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಯಾಟಿನಾ-19 ಎಂಬ ಹೆಸರಿನಿಂದ ಕರೆಯಲಾಗುವ ಭಾರತ ಮೂಲದ ನೆಲ್ಲೂರು ತಳಿಯ ಹಸು 4.8 ಮಿಲಿಯನ್‌ USD ಅಂದರೆ ಸುಮಾರು 40 ಕೋಟಿ ರೂಪಾಯಿಗೆ ಮಾರಾಟವಾಗಿದ್ದು, ಈ ಮೂಲಕ 2023ರಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಹಸು ಎಂದು ಗಿನ್ನೆಸ್‌ ರೆಕಾರ್ಡ್​ ಸೇರಿದೆ.

ಇದನ್ನೂ ಓದಿ :ಕಿವಿಯೋಲೆ ಅಡವಿಟ್ಟು ಲೋನ್‌ ಕೇಳಿದ ಅಜ್ಜಿ: ಹಳೆ ಸಾಲಕ್ಕೆ ಮನ್ನಾ ಎಂದ ಬ್ಯಾಂಕ್‌

ಜೊತೆಗೆ ಈ ನೆಲ್ಲೂರು ತಳಿ ಹಸು ಕೌ ಚಾಂಪಿಯನ್‌ ಆಫ್‌ ದಿ ವರ್ಲ್ಡ್‌ ಸ್ಪರ್ಧೆಯಲ್ಲಿ ಮಿಸ್‌ ಸೌತ್‌ ಅಮೇರಿಕಾ ಪ್ರಶಸ್ತಿಯನ್ನು ಕೂಡಾ ಗೆದ್ದಿದೆಯಂತೆ. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಗೆ ಸೇರಿದ ಈ ನೆಲ್ಲೂರು ತಳಿಯ ಹಸುಗಳು ನೋಡೋದಕ್ಕೆ ಸುಂದರವಾಗಿದ್ದು, ಬರೋಬ್ಬರಿ 1101 ಕೆ.ಜಿ ತೂಕ ಹೊಂದಿದೆಯಂತೆ.. ಇದೀಗ ಈ ತಳಿಯ ಹಸು ಭಾರತದಲ್ಲಿ ನಶಿಸುವ ಹಂತತದಲ್ಲಿದ್ದು, ಬ್ರೆಜಿಲ್​ನಲ್ಲಿ ಪ್ರತಿಯೊಬ್ಬ ರೈತನೂ ಈ ಹಸುವನ್ನು ಸಾಕೋದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾನಂತೆ.

RELATED ARTICLES

Related Articles

TRENDING ARTICLES