ಹಾವೇರಿ : ಅನಾರೋಗ್ಯದಿಂದ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೋರ್ವ ಕಳೆದ ಫೆ.10ರಂದು ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಅಂತ್ಯಕ್ರಿಯೆ ಮಾಡಲು ಕೊಂಡೊಯ್ಯುವಾಗ ಡಾಬಾ ಬಳಿ ಊಟ ಮಾಡುತ್ತೀಯ ಎಂಬ ಹೆಂಡತಿಯ ಕರೆಗೆ ಹೊಗೊಟ್ಟು ಮತ್ತೆ ಉಸಿರಾಡಲು ಆರಂಭಿಸಿದ್ದ ವ್ಯಕ್ತಿ ಇದೀಗ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಹೌದು ಹಾವೇರಿಯಾ ಬಂಕಾಪುರ ಅಶೋಕ್ ಗುಡಿಮನೆ ಎಂಬಾತ ಹಲವು ತಿಂಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ. ಇದೇ ಕಾರಣಕ್ಕೆ ಆತನನ್ನು ಧಾರವಾಡ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಆತ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಧೃಡಿಕರಿಸಿ ಶವವನ್ನು ಕೊಂಡೊಯ್ಯಲು ಸೂಚಿಸಿದ್ದರು. ಕುಟುಂಬಸ್ಥರು ಕೂಡ ಶವವನ್ನು ಆಂಬುಲೆನ್ಸ್ನಲ್ಲಿ ಶವವನ್ನು ತರುವ ವೇಳೆ. ಬಂಕಾಪುರ ಡಾಬಾದ ಬಳಿ ಹೆಂಡತಿ ಗೋಳಾಡುತ್ತಾ ಡಾಬಾ ಬಂತು ಊಟ ಮಾಡುತ್ತೀಯ ಎಂದು ಹೇಳಿದ್ದಳು. ಈ ವೇಳೆ ಗಂಡ ಅಶೋಕ್ ಉಸಿರಾಡಲು ಆರಂಭಿಸಿದ್ದ.
ಇದನ್ನೂ ಓದಿ :ಶಿವಲಿಂಗಕ್ಕೆ ಸುತ್ತು ಹಾಕಿ ಹೆಡೆ ಬಿಚ್ಚಿ ಕೂತ ನಾಗಪ್ಪ !
ನಂತರ ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಕಳೆದ ನಾಲ್ಕೈದು ದಿನಗಳಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಶೋಕ್ ಗುಡಿಮನೆ ಇದೀಗ ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದು ಬಂದಿದೆ. ಅಶೋಕ್ ಗುಡಿಮನೆ ಮೃತದೇಃ ಸ್ವಗ್ರಾಮ ಬಂಕಾಪುರದ ಮನೆಗೆ ಬಂದಿದ್ದು. ಕುಟುಂಬದ ಸಂಪ್ರದಾಯದಂತೆ ವಿಧಿವಿಧಾನ ನೆರವೇರಿಸಿ ಸಂಜೆ 5 ಗಂಟೆ ವೇಳೆಗೆ ಬಂಕಾಪುರ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ ಎಂದು ತಿಳಿದು ಬಂದಿದೆ.