ಗದಗ : ಶೆಡ್ಡಿಗೆ ಬೆಂಕಿ ತಗುಲಿ ಎರಡು ಆಕಳುಗಳು ಮತ್ತು ಕರು ಸಾವನ್ನಪ್ಪಿರುವ ಘಟನೆ ಗದಗದಲ್ಲಿ ನಡೆದಿದ್ದು. ನವೀನ್ ನವಲೆ ಎಂಬ ರೈತನಿಗೆ ಸೇರಿದ ಶೆಡ್ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದು ಬಂದಿದೆ.
ಗದಗ ಜಿಲ್ಲೆ, ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಘಟನೆ ನಡೆದಿದ್ದು. ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ ಗಾಡಸ್ವರೂಪ ಪಡೆದಿದೆ. ಈ ವೇಳೆ ಶೆಡ್ಡಿನಲ್ಲಿದ್ದ ಎರಡು ಆಕಳುಗಳು ಮತ್ತು ಒಂದು ಕರು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಜೊತೆಗೆ ಎರಡು ಟ್ರ್ಯಾಕ್ಟರ್ನಷ್ಟು ಹೊಟ್ಟು, 10 ಚೀಲ ಈರುಳ್ಳಿ ಕೂಡ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಮದುವೆ ಆರ್ಕೆಸ್ಟ್ರಾದಲ್ಲಿ ಕುಣಿಯುತ್ತಿದ್ದ ಯುವತಿಯನ್ನು ಮದುವೆಯಾದ ಯುವಕ: ವಿಡಿಯೋ ವೈರಲ್
ಬೆಂಕಿ ಅವಘಡದಲ್ಲಿ ರೈತ ನವೀನ್ ನವಲೆಗೆ ಸುಮಾರು 25 ಲಕ್ಷಕ್ಕೂ ಹೆಚ್ಚು ಹಾನಿಯಾಗಿದ್ದು. ಹಸುಗಳನ್ನು ಕಳೆದುಕೊಂಡಿರುವ ಕುಟುಂಬ ಕಂಗಾಲಾಗಿದೆ. ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.