ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ, ಮದುವೆಯಾದ ಕೆಲವೇ ಗಂಟೆಗಳಲ್ಲಿ ಯುವಕನೊಬ್ಬ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಯುವಕ ಮದುವೆಯಾದ ಖುಷಿಯಲ್ಲಿ ಸ್ನೇಹಿತರೊಂದಿಗೆ ಸಿಹಿ ತಿಂಡಿ ಖರೀದಿಸಲು ಕಾರಿನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ವರನೂ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.
ಮೃತನ ಹೆಸರು ಸತೀಶ್. ಇತ್ತೀಚೆಗೆ, ಅವರು ಮಿರ್ಗಂಜ್‌ನ ಸಂಗ್ರಾಮ್‌ಪುರ ಗ್ರಾಮದ ನಿವಾಸಿ ಸ್ವಾತಿ ಎಂಬಾಕೆಯನ್ನು ವಿವಾಹವಾದರು. ಎರಡು ಕುಟುಂಬಗಳು ಬಹಳ ವಿಜೃಂಬಣೆಯಿಂದ ಮದುವೆ ನಡೆಸಿದ್ದರು. ಎಲ್ಲಾ ಸಮಾರಂಭ ಮುಗಿದ ನಂತರ ಸಂಬಂಧಿಕರಿಗೆ ಸಿಹಿತಿಂಡಿಗಳನ್ನು ನೀಡಲು ವರ ಸತೀಶ್ ಮತ್ತು ಸ್ನೇಹಿತರು ಸ್ವೀಟ್ಸ್ಗಳನ್ನು ತರಲು ಹೋಗಿದ್ದರು.
ಇದನ್ನೂ ಓದಿ :ಸಾಲ ವಸೂಲಾತಿಗೆ ಬರುತ್ತಿದ್ದ ಯುವಕನನ್ನೆ ಮದುವೆಯಾದ ಯುವತಿ !
ಸತೀಶ್ ತನ್ನ 6 ಜನರ ಸ್ನೇಹಿತರೊಂದಿಗೆ ಸ್ವೀಟ್ಸ್ಗಳನ್ನು ತರಲು ನಗರಕ್ಕೆ ಎಂದು ಹೋಗುತ್ತಿದ್ದರು. ಆದರೆ ವೇಗವಾಗಿ ಹೋಗುತ್ತಿದ್ದ ವೇಳೆ ಕಾರ್ನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಟ್ರಕ್ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಮೂವರು ಸ್ಥಳದಲ್ಲೆ ಸಾವನ್ನಪ್ಪಿದ್ದು. ವರ ಸತೀಶ್ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಿಸದೆ ವರ ಸತೀಶ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಗಂಡನ ಸಾವಿನ ಸುದ್ದಿಯನ್ನು ಕೇಳುತ್ತಿದ್ದಂತೆ ಪತ್ನಿ ಸ್ವಾತಿ ಮೂರ್ಚೆ ತಪ್ಪಿದ್ದು. ಏಳೇಳು ಜನ್ಮ ಬದುಕಿ ಬಾಳಬೇಕಿದ್ದ ಜೋಡಿಗಳು ಮದುವೆಯಾದ 12 ಗಂಟೆಗಳಲ್ಲೆ ಸಾವನ್ನಪ್ಪಿರುವುದು ನಿಜಕ್ಕೂ ದುಃಖಕರ ಸುದ್ದಿಯಾಗಿದೆ.