ನಟ ಡಾಲಿ ಧನಂಜಯ್ ಇನ್ನು ಎರಡು ದಿನಗಳಲ್ಲಿ ದಾಂಪತ್ಯೆ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆಯಾಗಿ ಮೈಸೂರಿನಲ್ಲಿ ದೊಡ್ಡ ಸೆಟ್ ನಿರ್ಮಾಣವಾಗಿದ್ದು. ಸಾವಿರಾರು ಜನ ಗಣ್ಯರು ಆಗಮಿಸುವ ನಿರೀಕ್ಷೆ ಇದೆ. ಇದರ ನಡುವೆ ಸ್ವಗ್ರಾಮದಲ್ಲಿ ಶಾಲಾ ಮಕ್ಕಳೊಂದಿಗೆ ಜೊತೆಯಾಗಿ ಕುಳಿತು ಊಟ ಸವಿದಿದ್ದಾರೆ.
ಇದೇ ಫೆಬ್ರವರಿ 15 ಹಾಗೂ 16ರಂದು ಮೈಸೂರಿನಲ್ಲಿ ಅದ್ಧೂರಿಯಾಗಿ ಅಭಿಮಾನಿಗಳು, ಕುಟುಂಬಸ್ಥರು ಹಾಗೂ ಹಿತೈಶಿಗಳ ಸಮ್ಮುಖದಲ್ಲಿ ಮದುವೆ ಆಗಲಿದ್ದಾರೆ. ಹೀಗಾಗಿ ಅವರ ಹುಟ್ಟೂರಾದ ಅರಸಿಕೆರೆಯಲ್ಲಿ ಕಾಳೇನ ಹಳ್ಳಿಯಲ್ಲಿ ಮದುವೆ ಸಮಾರಂಭಗಳು ನಡೆಯುತ್ತಿವೆ.
ಇದನ್ನೂ ಓದಿ :ಬಿಯರ್ ಬಾಟೆಲ್ ಮೇಲೆ ರಾಷ್ಟ್ರಪಿತ ಗಾಂಧೀಜಿ ಪೋಟೊ: ನೆಟ್ಟಿಗರಿಂದ ಆಕ್ರೋಶ
ಧನಂಜಯ್ ತಮ್ಮ ಕುಟುಂಬದ ಸಂಪ್ರದಾಯದಂತೆ ಮೊದಲು ಅರಸಿಕೆರೆಯ ಜೇನುಕಲ್ಲು ಸಿದ್ದೇಶ್ವರ ದೇವರ ಕೊಂಡ ತುಳಿದಿದ್ದಾರೆ. ಇದಕ್ಕೂ ಮೊದಲು ಧನಂಜಯರನ್ನು ಮೆರೆವಣಿಗೆ ಮೂಲಕ ಕರೆತಂದರು. ಈ ವೇಳೆ ಡಾಲಿ ಧನಂಜಯ್ ಮನೆ ದೇವರ ಪೂಜೆ ಸಲ್ಲಿಸಿದರು. ನಂತರ ಶಾಲಾ ಮಕ್ಕಳ ಜೊತೆಯಲ್ಲಿ ಕುಳಿತು ಊಟ ಸವಿದರು.
ಮೈಸೂರಿನಲ್ಲಿ ಮದುವೆಗೆ ಎಂದು ಬೃಹತ್ ಸೆಟ್ ನಿರ್ಮಾಣವಾಗಿದ್ದು. ಸಿನಿಮಾ ಗಣ್ಯರು, ರಾಜಕೀಯ ಗಣ್ಯರು ಸೇರಿದಂತೆ ಸಾವಿರಾರು ಜನರು ಆಗಮಿಸುವ ನಿರೀಕ್ಷೆ ಇದೆ. ಅಭಿಮಾನಿಗಳಿಗಾಗಿ ಪ್ರತ್ಯೇಕ ವಿದ್ಯಾಪತಿ ಪೀಠ ದ್ವಾರವನ್ನು ನಿರ್ಮಿಸಲಾಗಿದೆ.