Sunday, February 23, 2025

389 ರೂಗೆ ಸಿಗಲಿದ್ದಾನೆ ಬಾಯ್​ಫ್ರೆಂಡ್​: ಪ್ರೇಮಿಗಳ ದಿನದಂದು ಮತ್ತೊಂದು ಉದ್ಯಮ ಆರಂಭ !

ಬೆಂಗಳೂರು : ಜಪಾನ್​, ಕೊರಿಯ ದೇಶಗಳಲ್ಲಿ ಬಾಡಿಗೆ ಬಾಯ್​ಫ್ರೆಂಡ್​ ಮತ್ತು ಬಾಡಿಗೆ ಗರ್ಲ್​ಫ್ರೆಂಡ್​​ ಸಿಗುತ್ತಾರೆ ಎಂಬ ಕುರಿತು ಕೇಳಿದ್ದೇವೆ. ಆದರೆ ಇದು ವಿದೇಶಿ ಸಂಸ್ಕೃತಿಯಾಗಿದ್ದು. ಇದನ್ನು ಭಾರತೀಯರು ವಿರೋಧಿಸುತ್ತಾರೆ. ಇದೀಗ ಬೆಂಗಳೂರಿನಲ್ಲಿ ವ್ಯಾಲೆಂಟೈನ್ಸ್​​ ಡೇಗೆ ಬಾಯ್​ ಫ್ರೆಂಡ್​ ಬೇಕಾ? ಎಂಬ ಪೋಸ್ಟರ್​ ಅಂಟಿಸಿದ್ದಾರೆ. ಇದಕ್ಕೆ ಸಾರ್ವಜನಿಕರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದಾರೆ.

ಹೌದು. ಇಂದು ವ್ಯಾಲೆಂಟೇನ್ ಡೇ ಹಿನ್ನೆಲೆ ಕಿಡಿಗೇಡಿಗಳು ಇಂಥದ್ದೊಂದು ಪೋಸ್ಟರ್‌ಗಳನ್ನ ಎಲ್ಲೆಂದರಲ್ಲಿ ಅಂಟಿಸಿದ್ದಾರೆ.’ವ್ಯಾಲೆಂಟೈನ್ ಡೇಗೆ ಬಾಯ್‌ಫ್ರೆಂಡ್ ಇಲ್ವಾ? ಹಾಗಾದ್ರೆ ಒಂದು ದಿನದ ಬಾಡಿಗೆ ಬಾಯ್‌ಫ್ರೆಂಡ್‌ಗಾಗಿ ಪೇ ಮಾಡಿ ಎಂದು ಬರೆದಿರುವ ಪೋಸ್ಟರ್ ಹರಿಬಿಟ್ಟಿರುವ ಕಿಡಿಗೇಡಿಗಳು.

ಇದನ್ನೂ ಓದಿ : ಪ್ರೀತಿ ಮಾಡುತ್ತಿದ್ದ ಮಗಳನ್ನು ಕೊ*ಲೆ ಮಾಡಿ, ಅಪಘಾತದ ನಾಟಕ ಆಡಿದ ಖತರ್ನಾಕ್​ ಅಪ್ಪ !

ನಗರದ ವಿವಿಧ ಪ್ರದೇಶಗಳಲ್ಲಿ ಈ ರೀತಿಯ ಪೋಸ್ಟರ್​ಗಳು ಕಂಡು ಬಂದಿದ್ದು. ಜಯನಗರ, ಬನಶಂಕರಿ, ಬಿಡಿಎ ಕಾಂಪ್ಲೇಕ್ಸ್​ಗಳ ಬಳಿ ‘ವ್ಯಾಲೆಂಟೆನ್ಸ್ ಡೇಗೆ ಹುಡುಗ ಬೇಕಾದ್ರೆ ಕೇವಲ ರೂ 389/- ‌ಕೊಟ್ರೆ ಸಾಕು ಒಂದು ದಿನದ ಬಾಯ್ ಫ್ರೆಂಡ್ ಸಿಗಲಿದ್ದಾನೆ ಎಂದು ಬರೆದಿರುವ ಪೋಸ್ಟರ್​ಗಳು ಕಂಡು ಬಂದಿವೆ.

ಈ ವಿಚಿತ್ರ ಪೋಸ್ಟರ್​ಗಳನ್ನು ಕಂಡು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿ ಪೋಸ್ಟರ್ ಅಂಟಿಸುವ ಮೂಲಕ ದುಷ್ಟರು ನಗರದ ಸಂಸ್ಕೃತಿ ಹಾಳು ಮಾಡಲು ಹೊರಟಿದ್ದಾರೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ಟ್ವಿಟರ್ ಎಕ್ಸ್‌ನಲ್ಲಿ ಟ್ಯಾಗ್ ಮಾಡಿ ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES