ಸಿಲಿಕಾನ್ ಸಿಟಿ ಬೆಂಗಳೂರು ಸದಾ ಕಾಲ ಒಂದಲ್ಲ ಒಂದು ಬಿರುದನ್ನು ಪಡೆದು ಸುದ್ದಿಯಲ್ಲಿರುವ ನಗರ. ಸಿಲಿಕಾನ್ ವ್ಯಾಲಿ, ಐಟಿ-ಸಿಟಿ, ಗಾರ್ಡನ್ ಸಿಟಿ ಎಂದು ಕರೆಸಿಕೊಳ್ಳುವ ಈ ನಗರ ಗಾರ್ಬೇಜ್ ಸಿಟಿ, ಟ್ರಾಫಿಕ್ ಸಿಟಿ ಎಂಬ ಕಳಂಕಿತ ಬಿರುದನ್ನು ಪಡೆದುಕೊಂಡಿದೆ. ಇದೀಗ ಬೆಂಗಳೂರಗೆ ಮತ್ತೊಂದು ಬಿರುದು ಸಿಕಿದ್ದು. ದೇಶದಲ್ಲೆ ಅತಿ ಹೆಚ್ಚು ಬಾಡಿಗೆ ಪಡೆಯುವ ನಗರಗಳ ಪೈಕಿ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಂಡಿದೆ.
ಅನ್ರಾಕ್ ಎಂಬ ಸಂಸ್ಥೆ ನಡೆಸಿದ ಸರ್ವೆಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು. ಭಾರತದಲ್ಲಿ ಅತಿ ಹೆಚ್ಚು ಬಾಡಿಗೆ ಪಡೆಯುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ನಂಬರ್ ಒನ್ ಸ್ಥಾನದಲ್ಲಿದೆ. ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಕಚೇರಿ ಬಾಡಿಗೆ ಶೇ 26ರಷ್ಟು ಏರಿಕೆಯಾಗಿದ್ದು. ಇದು ಭಾರತದಲ್ಲೇ ಅತಿ ಹೆಚ್ಚು ಎಂದು ರಿಯಲ್ ಎಸ್ಟೇಟ್ ಕಂಪನಿ ಅನಾರಕ್ ಸರ್ವೆ ವರದಿ ಪ್ರಕಟಣೆ ಮಾಡಿದೆ.
ಇದನ್ನೂ ಓದಿ :ಧರ್ಮಸ್ಥಳ ಸಂಘದಿಂದ ಅನ್ಯಾಯ ಎಂದ ಗಿರೀಶ್ ಮಟ್ಟಣನವರ್ ಚಳಿ ಬಿಡಿಸಿದ ಮಹಿಳೆಯರು
ದೆಹಲಿ-ಎನ್‌ಸಿಆರ್, ಮುಂಬೈ, ಕೋಲ್ಕತ್ತ, ಚೆನ್ನೈ, ಹೈದರಾಬಾದ್, ಬೆಂಗಳೂರು ಹಾಗೂ ಪುಣೆ ನಗರಗಳಲ್ಲಿ ಕೈಗೊಂಡ ಸಮೀಕ್ಷೆಯ ದತ್ತಾಂಶ ಪ್ರಕಟಣೆಯಾಗಿದ್ದು. ಈ ಏಳು ನಗರಗಳ ಪೈಕಿ ಅತಿ ಹೆಚ್ಚು ಕಚೇರಿ ಬಾಡಿಗೆ ಪಡೆಯುವ ನಗರದಲ್ಲಿ ಬೆಂಗಳೂರು ಮೊದಲ ಸ್ಥಾನ ಹೊಂದಿದೆ.
ಬೆಂಗಳೂರು 2019ರಲ್ಲಿ ಪ್ರತೀ ಚದರ ಅಡಿಗೆ ₹74 ಇದ್ದರೆ, 2024ಕ್ಕೆ ಅದು ₹ 93ಕ್ಕೆ ಏರಿಕೆ. ಚೆನ್ನೈನಲ್ಲಿ ಶೇ 20ರಷ್ಟು ಏರಿಕೆಯಾಗಿದ್ದು, 2024 ರಲ್ಲಿ ಮಾಸಿಕ ಕಚೇರಿ ಬಾಡಿಗೆ ಸರಾಸರಿ ₹75 ಇದ್ದರೆ, 2019ರಲ್ಲಿ ₹60 ಇತ್ತು. ದೆಹಲಿ ಎನ್‌ಸಿಆರ್‌ನಲ್ಲಿ ಅತಿ ಕಡಿಮೆ ಅಂದರೆ, ಶೇ 10 ರಷ್ಟು ಮಾತ್ರ ಏರಿಕೆಯಾಗಿದೆ.
2019ರಲ್ಲಿ ₹ 78 ಇದ್ದರೆ, 2024ರಲ್ಲಿ ₹86 ಕ್ಕೆ ಏರಿಕೆಯಾಗಿದೆ. ಪುಣೆಯಲ್ಲಿ ₹ 68 ರಿಂದ ₹81ಕ್ಕೆ, ಮುಂಬೈನಲ್ಲಿ ₹ 124ರಿಂದ ₹ 140ಕ್ಕೆ ಏರಿಕೆಯಾಗಿದ್ದು. ಕ್ರಮವಾಗಿ ಶೇ 19 ಹಾಗೂ ಶೇ 13ರಷ್ಟು ಏರಿಕೆ ಆಗಿದೆ. ಕೋಲ್ಕತ್ತದಲ್ಲಿ ರೂ 52 ನಿಂದ ರೂ 64ಕ್ಕೆ ಏರಿಕೆಯಾಗಿದೆ ಎಂದು ಅನ್ ರಾಕ್ ಸಂಸ್ಥೆಯ ಸರ್ವೆ ವರದಿ ಪ್ರಕಟಣೆ ಮಾಡಿದೆ.