Monday, February 24, 2025

ಅನಂತ್​ಗೆ ಬಾಲ್ಯದಿಂದಲೂ ಅಸ್ತಮ ಇದೆ: ಮಗನ ಮದುವೆ ಟೀಕೆಗೆ ಉತ್ತರ ಕೊಟ್ಟ ನೀತಾ ಅಂಭಾನಿ

ಉದ್ಯಮಿ ಮುಕೇಶ್​ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಮಗನ ಮದುವೆ ಪ್ರಪಂಚದ ಗಮನವನ್ನು ಸೆಳೆದ ಮದುವೆಯಾಗಿತ್ತು. ಈ ಅದ್ದೂರಿ ಮದುವೆಗೆ ಅನೇಕ ನೆಟ್ಟಿಗರು ಟೀಕೆಗಳನ್ನು ಮಾಡಿದ್ದರು. ಇದರ ಕುರಿತು ಮೊದಲ ಬಾರಿಗೆ ನೀತಾ ಅಂಭಾನಿ ಪ್ರತಿಕ್ರಿಯೆ ನೀಡಿದ್ದು. ಪ್ರತಿಯೊಬ್ಬ ತಂದೆ-ತಾಯಿಗೂ ಮಕ್ಕಳ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು ಎಂಬ ಆಸೆ ಇರುತ್ತದೆ. ಆ ನನ್ನ ಆಸೆ ಈಡೇರಿದೆ ಎಂದು ಹೇಳಿದರು.

ಇಂದ್ರ ಲೋಕವೇ ಧರೆಗೆ ಇಳಿದಂತೆ ಅನಂತ್​ ಅಂಭಾನಿಯ ಮದುವೆ ಮುಂಬೈನಲ್ಲಿ ನೆರವೇರಿತ್ತು. ಈ ಮದುವೆಗೆ ಪ್ರಧಾನಿ ಮೋದಿ ಸೇರಿದಂತೆ ದೇಶ ವಿದೇಶಗಳಿಂದ ಗಣ್ಯರ ದಂಡೆ ಹರಿದು ಬಂದಿತ್ತು. ಈ ಕುರಿತು ಅನೇಕ ಟೀಕೆಗಳು ಕೇಳಿ ಬಂದಿದ್ದವು. ಇಷ್ಟೆಲ್ಲಾ ಖರ್ಚು ಮಾಡಿ ಮಗನ ಮದುವೆ ಮಾಡಬೇಕಿತ್ತಾ ಎಂಬ ಪ್ರಶ್ನೆಗಳು ಹರಿದಾಡಲಾರಂಭಿಸಿದ್ದವು. ಈ ಕುರಿತು ನೀತಾ ಅಂಭಾನಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ :ಅತಿ ಹೆಚ್ಚು ಬಾಡಿಗೆ ಪಡೆಯುವ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ನಂಬರ್ ಓನ್​ ಪಟ್ಟ

ಬ್ಲೂರ್ಮಬರ್ಗ್​ಗೆ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ನೀತಾ ಅಂಭಾನಿ ಈ ಕುರಿತು ಮಾತನಾಡಿದ್ದು. ಮಗನ ಮದುವೆ ಬಗ್ಗೆ ಕೇಳಿ ಬಂದ ಟೀಕೆಗಳಿಂದ ನಿಮಗೆ ಬೇಸರ ತರಿಸಿತೆ ಎಂಬ ಪ್ರಶ್ನೆಗೆ ಉತ್ತರಿಸಿದ ನೀತಾ ಅಂಭಾನಿ ‘ನಮ್ಮ ಕನಸು ಈಡೇರಿದ್ದಲ್ಲದೇ ಈ ಮದುವೆಯಿಂದ ಮೇಡ್ ಇನ್ ಇಂಡಿಯಾ ಬ್ರಾಂಡ್‌ನ ಪರಿಕಲ್ಪನೆ ಯಶಸ್ವಿಯಾಯಿತು. ಮದುವೆಯಲ್ಲಿ ಭಾರತೀಯ ಶ್ರೀಮಂತ ಪರಂಪರೆ ರಾರಾಜಿಸಿತು. ಆ ಬಗ್ಗೆ ಹೆಚ್ಚೆನೂ ಹೇಳುವುದಿಲ್ಲ.

ಜೊತೆಗೆ ಅನಂತ್​​ಗೆ ಅಸ್ತಮಾ ಇದ್ದಿದ್ದರಿಂದ ಮಗ ಬಾಲ್ಯದಲ್ಲಿಯೇ ಸ್ಕೂಲಕಾಯ ಅವರಿಸಿಕೊಂಡಿತು. ಆದರೂ ಅವನು ಚಿಂತೆ ಮಾಡಲಿಲ್ಲ. ನಾನು ಹೊರಗೆ ಹೇಗೆ ಕಾಣುತ್ತೇನೆ ಎಂಬುದು ಮುಖ್ಯವಲ್ಲ ಅಮ್ಮಾ, ನನ್ನ ಒಳಗಿನ ಹೃದಯ ಹೇಗಿದೆ ಎಂಬುದು ಮುಖ್ಯವೆಂದು ಹೇಳಿ ಹಸೆಮಣೆ ಏರಿದಾಗ ನಮಗಾದ ಆನಂದ ಅಷ್ಟಿಷ್ಟಲ್ಲ’ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES