ಲಕ್ನೋ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ 50 ಕೋಟಿಗೂ ಹೆಚ್ಚು ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದು. ಕುಂಭಮೇಳದಿಂದ ಸುಮಾರು 3 ಲಕ್ಷ ಆದಾಯ ಬಂದಿದೆ ಎಂದು ತಿಳಿಸಿದ್ದಾರೆ.
ಕಳೆದ ಜನವರಿ 14ರಿಂದ ಪ್ರಯಾಗ್ ರಾಜ್ನಲ್ಲಿ ಕುಂಭಮೇಳ ನಡೆಯುತ್ತಿದ್ದು. ಇಲ್ಲಿಯವರೆಗೂ ಸುಮಾರು 50 ಕೋಟಿಗೂ ಹೆಚ್ಚು ಜನರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಕ್ತರು ‘ಏಕ ಭಾರತ ಶ್ರೇಷ್ಠ ಭಾರತ’ದ ಸಂದೇಶವನ್ನು ಸ್ವೀಕರಿಸಿದ್ದಾರೆ ಎಂದು ಯೋಗಿ ಪ್ರತಿಪಾಧಿಸಿದ್ದಾರೆ.
ಇದನ್ನೂ ಓದಿ :ಅನಂತ್ಗೆ ಬಾಲ್ಯದಿಂದಲೂ ಅಸ್ತಮ ಇದೆ: ಮಗನ ಮದುವೆ ಟೀಕೆಗೆ ಉತ್ತರ ಕೊಟ್ಟ ನೀತಾ ಅಂಭಾನಿ
ಮುಂದುವರಿದು ಮಾತನಾಡಿದ ಆದಿತ್ಯನಾಥ್ ‘ಈ ಬಾರಿ ಹೆಚ್ಚಿನ ಸಂಖ್ಯೆಯ ಭಕ್ತರು ರಸ್ತೆ ಮಾರ್ಗವಾಗಿ ಪ್ರಯಾಗ್‌ರಾಜ್‌ಗೆ ಆಗಮಿಸಿದ್ದಾರೆ ಎಂದು ಹೇಳಿದರು. ಇದರೊಂದಿಗೆ ರೈಲು ಮತ್ತು ವಿಮಾನ ಸಂಚಾರ ವ್ಯವಸ್ಥೆಯೂ ಉತ್ತಮವಾಗಿತ್ತು, ನಿತಿನ್ ಗಡ್ಕರಿ ಅವರು ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ಶ್ಲಾಘಿಸಿದರು. ಇದರೊಂದಿಗೆ ಮಹಾಕುಂಭ ಮೇಳ ಅಂತ್ಯವಾಗುವುದರೊಳಗೆ ಇನ್ನು ಹೆಚ್ಚಿನ ಅಂದಾಜು 6 ರಿಂದ 7 ಕೋಟಿ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಕುಂಭಮೇಳದಲ್ಲಿ ಮೂಲಭೂತ ಸೌಕರ್ಯ ನಿರ್ಮಾಣ ಮಾಡಲು ಎಂದು 15 ಸಾವಿರ ಕೋಟಿ ಹಣವನ್ನು ವ್ಯಯಿಸಿದ್ದೇವೆ. ಇದು ಪ್ರಯಾಗ್ರಾಜ್ ನಗರದ ಸೌಂದರ್ಯೀಕರಣಕ್ಕೂ ಕಾರಣವಾಗಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಸುಮಾರು 3 ಲಕ್ಷ ಕೋಟೊ ಆಧಾಯ ಹರಿದು ಬಂದಿದೆ ಎಂದು ಹೇಳಿದರು.