Wednesday, February 12, 2025

ಬಿರು ಬೇಸಿಗೆಯಲ್ಲಿ ಬಸವಳಿಯಲಿದ್ದಾರೆ ರಾಜ್ಯದ ಜನತೆ: ಹವಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು : ಚಳಿಗಾಲ ಕಳೆಯುತ್ತಿದೆ. ಇದರ ಬೆನ್ನಲ್ಲೆ ಬಿರುಬೇಸಿಗೆ ಆರಂಭವಾಗುತ್ತಿದ್ದು. ಜನರು ಕಲ್ಲಂಗಡಿ, ಕಬ್ಬಿನ ಹಾಲು, ತಂಪು ಪಾನೀಯಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೆ ಹವಮಾನ ಇಲಾಖೆ ಈ ಬಾರಿ ಉಷ್ಣಾಂಶ ಮತ್ತಷ್ಟು ಏರಿಕೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.

ರಾಜ್ಯದಲ್ಲಿ ಉಷ್ಣಾಂಶ ಏರಿಕೆ ಕುರಿತು ಹವಾಮಾನ ಇಲಾಖೆ ನಿರ್ದೇಶಕರ ಸಿ.ಎಸ್ ಪಾಟೀಲ್ ಮಾಹಿತಿ ನೀಡಿದ್ದು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸೂರ್ಯ ಮತ್ತಷ್ಟು ಸುಡಲಿದ್ದಾನೆ. ನಿನ್ನೆ ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ‌ ಸೆ. ದಾಖಲಾಗಿದ್ದು. ದಕ್ಷಿಣ ಒಳನಾಡಿನ ಬಹುತೇಕ ಕಡೆ 31-33 ಡಿಗ್ರಿ ಸೆ. ಉಷ್ಣಾಂಶ ದಾಖಲಾಗಿದೆ. ಮುಂದಿನ ಏಳು ದಿನಗಳಲ್ಲಿ ದಕ್ಷಿಣ ಒಳನಾಡಿನಲ್ಲಿ 34 ಡಿ.ಸೆ ಗರಿಷ್ಟ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ಮಾಹಿತಿ ದೊರೆತಿದೆ.

ಇದನ್ನೂ ಓದಿ :ಕೇವಲ 10 ದಿನಗಳಲ್ಲಿ 25ಕ್ಕೂ ಹೆಚ್ಚು ಹಸುಗಳ ಸಾ*ವು: ಮಾರಣಾಂತಿಕ ಕಾಯಿಲೆಯ ಭೀತಿ

ಉತ್ತರ ಒಳನಾಡಿನಲ್ಲಿ ಗರಿಷ್ಟ ಉಷ್ಣಾಂಶ 34-36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು,ಮುಂದಿನ ಏಳು ದಿನ ಉತ್ತರ ಒಳನಾಡಿನಲ್ಲಿ 34 ರಿಂದ 36 ಡಿಗ್ರಿ‌ ಸೆ. ಗರಿಷ್ಟ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಕನಿಷ್ಟ ಉಷ್ಣಾಂಶ 18-20 ಡಿಗ್ರಿ‌ ಸೆಲ್ಸಿಯಸ್ ವರೆಗೂ ದಾಖಲಾಗುವ ಸಾಧ್ಯತೆ ಇದ್ದು. ಕರಾವಳಿಯಲ್ಲಿ ಕನಿಷ್ಟ ಉಷ್ಣಾಂಶ 20 ಡಿ.ಸೆ ಹಾಗೂ ಗರಿಷ್ಟ ಉಷ್ಣಾಂಶ 35ಡಿ.ಸೆ ದಾಖಲಾಗುವ ಸಾಧ್ಯತೆ ಇದೆ.

ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಗರಿಷ್ಟ 38 ರಿಂದ 39 ಡಿಗ್ರಿ ಸೆ. ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದ್ದು.
ಬೆಂಗಳೂರಿನಲ್ಲಿ ಮಾರ್ಚ್, ಏಪ್ರಿಲ್ ‌ನಲ್ಲಿ 39 ಡಿ.ಸೆ ದಾಖಲಾಗುವ ಸಾಧ್ಯತೆ ಇದೆ. ಉತ್ತರ ಒಳನಾಡುನಲ್ಲಿ 42 ರಿಂದ 43 ಡಿಗ್ರಿ.‌ಸೆಲ್ಸಿಯಸ್ ಗರಿಷ್ಟ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಗಾಳಿ ವಿರುದ್ದ ದಿಕ್ಕಿನಲ್ಲಿ ಚಲಿಸುತ್ತಿರುವುದೇ ಉಷ್ಣಾಂಶ ಏರಿಕೆಗೆ ಕಾರಣ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.

RELATED ARTICLES

Related Articles

TRENDING ARTICLES