Wednesday, February 12, 2025

ಚಲಿಸುತ್ತಿದ್ದ ಬಸ್​ನಿಂದ ಕೆಳಗೆ ಬಿದ್ದು ವಿದ್ಯಾರ್ಥಿ ಸಾ*ವು

ಶಿವಮೊಗ್ಗ : ಚಲಿಸುತ್ತಿದ್ದ ಸಿಟಿ ಬಸ್ಸಿನಿಂದ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು. ಬಸ್ಸಿನ ಪುಟ್​​ ಬೋರ್ಡ್ ಮೇಲೆ ನಿಂತಿದ್ದ ವಿದ್ಯಾರ್ಥಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಮೃತ ವಿದ್ಯಾರ್ಥಿಯನ್ನು ಯಶ್ವಂತ್​ ಎಂದು ಗುರುತಿಸಲಾಗಿದೆ.

ಶಿವಮೊಗ್ಗದ ಬಿಎಚ್​.ರಸ್ತೆಯಲ್ಲಿ ಮೈಲಾರೇಶ್ವರ ದೇವಾಲಯದ ಮುಂಭಾಗದ ರಸ್ತೆಯಲ್ಲಿ ದುರ್ಘಟನೆ ನಡೆದಿದ್ದು. ಗುರುಪುರದ ನಿವಾಸಿ ಯಶ್ವಂತ್ ಯಶ್ವಂತ್​ ನಗರದ ನ್ಯಾಷನಲ್​ ಪಿಯು ಕಾಲೇಜಿಲ್ಲಿ ಪಿಯುಸಿ ಓದುತ್ತಿದ್ದ. ಕಾಲೇಜಿಗೆ ಎಂದು ಬಸ್ಸಿನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿ ಬಸ್​ ಒಳಗೆ ಸಾಕಷ್ಟು ರಶ್​ ಇದ್ದ ಕಾರಣ ಬಸ್ಸಿನ ಪುಟ್​ಬೋರ್ಡ್​ ಮೇಲೆ ನಿಂತು ಕಾಲೇಜಿಗೆ ತೆರಳುತ್ತಿದ್ದ.

ಇದನ್ನೂ ಓದಿ :ಉಚಿತ ಭಾಗ್ಯಗಳಿಂದ ಜನರು ಕೆಲಸ ಮಾಡಲು ಸಿದ್ದರಿಲ್ಲ : ಸುಪ್ರೀಂ ಕೋರ್ಟ್​

ಈ ವೇಳೆ ಬಸ್ಸಿನಿಂದ ವಿದ್ಯಾರ್ಥಿ ಆಯತಪ್ಪಿ ಕೆಳಗೆ ಬಿದ್ದಿದ್ದು. ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಘಟನೆಯ ದೃಷ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು. ಘಟನೆ ಸಂಬಂಧ ಸಂಚಾರಿ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES