Saturday, August 23, 2025
Google search engine
HomeUncategorizedಅವಾಚ್ಯ ಶಬ್ದಗಳಿಂದ ನಿಂದಿಸಿದ ಗಣಿತ ಶಿಕ್ಷಕನಿಗೆ ಕಪಾಳ ಮೋಕ್ಷ ಮಾಡಿದ ಪ್ರಿನ್ಸಿಪಲ್​

ಅವಾಚ್ಯ ಶಬ್ದಗಳಿಂದ ನಿಂದಿಸಿದ ಗಣಿತ ಶಿಕ್ಷಕನಿಗೆ ಕಪಾಳ ಮೋಕ್ಷ ಮಾಡಿದ ಪ್ರಿನ್ಸಿಪಲ್​

ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಶಿಕ್ಷಕರು ಅವರಿಗೆ ಗದರುವಂತಹ, ಪೆಟ್ಟು ಕೊಡುವಂತಹ ದೃಶ್ಯವನ್ನು ನೋಡಿರುತ್ತೀರಿ. ಆದರೆ ಇಲ್ಲೊಂದು ಶಾಲೆಯಲ್ಲಿ ಪ್ರಿನ್ಸಿಪಾಲ್‌ ಗಣಿತ ಶಿಕ್ಷಕನ ಕೆನ್ನೆಗೆ ಬಾರಿಸಿದ್ದಾರೆ. ಹೌದು ತರಗತಿಯಲ್ಲಿ ಅನುಚಿತ ವರ್ತನೆ ತೋರಿದರೆಂದು ಶಿಕ್ಷಕನಿಗೆ ಪ್ರಿನ್ಸಿಪಾಲ್‌ 25 ಸೆಕೆಂಡುಗಳಲ್ಲಿ 18 ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಈ ಆಘಾತಕಾರಿ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಕೆಲವೊಂದು ಬಾರಿ ವಿದ್ಯಾರ್ಥಿಗಳಿಗೆ ಪಾಠ, ಸಂಸ್ಕಾರ ಹೇಳಿಕೊಡಬೇಕಾದ ಶಿಕ್ಷಕರೇ ಅತಿರೇಕದ ವರ್ತನೆಯನ್ನು ತೋರುತ್ತಿರುತ್ತಾರೆ. ಹೀಗೆ ವಿದ್ಯಾರ್ಥಿಗಳ ಕೈಯಲ್ಲಿ ಕೆಲಸ ಮಾಡಿಸಿ, ಪಾಠ ಮಾಡದೆ ಕ್ಲಾಸ್‌ ರೂಮ್‌ನಲ್ಲಿ ಮಲಗಿ, ಕುಡಿದು ಶಾಲೆಗೆ ಬಂದು ರಂಪಾಟ ಮಾಡಿದ ಶಿಕ್ಷಕರಿಗೆ ಸಂಬಂಧಪಟ್ಟ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು.

ಇದನ್ನೂ ಓದಿ :ಅಣ್ಣ ಹಜಾರೆರನ್ನು ಮಹಾತ್ಮರನ್ನಾಗಿ ಮಾಡಿದ್ದು ಕೇಜ್ರಿವಾಲ್​: ಸಂಜಯ್​ ರಾವತ್​

ಇದೀಗ ಅಂತಹದ್ದೇ ದೃಶ್ಯವೊಂದು ಹರಿದಾಡುತ್ತಿದ್ದು, ತರಗತಿಯಲ್ಲಿ ಅನುಚಿತ ವರ್ತನೆ ತೋರಿದರೆಂದು ಗಣಿತ ಶಿಕ್ಷಕನಿಗೆ ಸ್ಕೂಲ್‌ ಪ್ರಿನ್ಸಿಪಾಲ್‌ 25 ಸೆಕೆಂಡುಗಳಲ್ಲಿ 18 ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಘಟನೆ ಗುಜರಾತ್‌ನ ಭರೂಚ್‌ ಜಿಲ್ಲೆಯ ನವಯುಗ್‌ ಶಾಲೆಯಲ್ಲಿ ನಡೆದಿದ್ದು, ತರಗತಿಯಲ್ಲಿ ಅನುಚಿತ ವರ್ತನೆ, ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ ಮೇರೆಗೆ ಸ್ಕೂಲ್‌ ಪ್ರಿನ್ಸಿಪಾಲ್‌ ಗಣಿತ ಶಿಕ್ಷಕನ ಕೆನ್ನೆಗೆ ಬಾರಿಸಿದ್ದಾರೆ. ಪ್ರಾಂಶುಪಾಲ ಹಿತೇಂದ್ರ ಠಾಕೂರ್‌ ಗಣಿತ ಶಿಕ್ಷಕರಾದ ರಾಜೇಂದ್ರ ಪಾರ್ಮರ್‌ ಎಂಬವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಆಫೀಸ್‌ ರೂಮ್‌ನಲ್ಲಿ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೊನೆಯಲ್ಲಿ ಪ್ರಿನ್ಸಿಪಾಲ್‌ ಕೋಪದಲ್ಲಿ 25 ಸೆಕೆಂಡುಗಳಲ್ಲಿ ಗಣಿತ ಶಿಕ್ಷಕನಿಗೆ 18 ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಅಲ್ಲಿದ್ದ ಸಹ ಶಿಕ್ಷಕರು ಮಧ್ಯಪ್ರವೇಶಿಸಿ ಇವರಿಬ್ಬರ ಜಗಳವನ್ನು ಶಮನಗೊಳಿಸಿದ್ದು, ಈ ಕುರಿತ ಸಿಸಿ ದೃಶ್ಯ ಇದೀಗ ವೈರಲ್‌ ಆಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments