ಕೇರಳ: ಇತ್ತೀಚೆಗೆ ಕೇರಳದ ವಿವಿಧ ಕಾಲೇಜುಗಳಲ್ಲಿ ರ‍್ಯಾಗಿಂಗ್ ಚಟುವಟಿಕೆ ಹೆಚ್ಚಿತ್ತಿರುವುದು ಆತಂಕ ಸೃಷ್ಟಿಸುತ್ತಿದೆ. ಇದೀಗ ಮತ್ತೊಂದು ರ್ಯಾಗಿಂಗ್ ಪ್ರಕರಣ ಬೆಳಕಿಗೆ ಬಂದಿದ್ದು. ಕೊಟ್ಟಾಯಂ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗ ಅಮಾನುಷವಾಗಿ ಕಳೆದ ಮೂರು ತಿಂಗಳಿಂದ ರ‍್ಯಾಗಿಂಗ್‌ಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ‘
ಕೊಟ್ಟಯಾಂ ನರ್ಸಿಂಗ್ ಕಾಲೇಜಿನಲ್ಲಿ ಈ ಅಮಾನುಷ ಘಟನೆ ನಡೆದಿದ್ದು. ಮೂರನೇ ವರ್ಷದ ಐವರು ವಿದ್ಯಾರ್ಥಿಗಳು ರ‍್ಯಾಗಿಂಗ್ ನೆಪದಲ್ಲಿ ಪ್ರಥಮ ವರ್ಷದ ಮೂವರು ವಿದ್ಯಾರ್ಥಿಗಳನ್ನು ಹಿಂಸಿಸಿದ್ದಾರೆ. ‘ಜೂನಿಯರ್ ವಿದ್ಯಾರ್ಥಿಗಳಿಗೆ ಬೆತ್ತಲೆಯಾಗಿ ನಿಲ್ಲುವಂತೆ ಒತ್ತಾಯಿಸಿ, ಅವರ ಖಾಸಗಿ ಅಂಗಗಳಿಗೆ ಡಂಬಲ್ಸ್‌ಗಳನ್ನು ನೇತು ಹಾಕಲಾಗುತ್ತಿತ್ತು.
ಇದನ್ನೂ ಓದಿ :ಪತ್ನಿಯೊಂದಿಗೆ ಕುಂಭಮೇಳಕ್ಕೆ ಭೇಟಿ ನೀಡಿದ ಅನಿಲ್ ಕುಂಬ್ಳೆ
ಜೊತೆಗೆ ‘ಜ್ಯಾಮಿಟ್ರಿ ಬಾಕ್ಸ್ ಕಂಪಾಸ್‌ನಲ್ಲಿದ್ದ ಚೂಪಾದ ವಸ್ತುಗಳಿಂದ ಗಾಯಗೊಳಿಸಲಾಗುತ್ತಿತ್ತು. ಬಳಿಕ ಗಾಯಗಳಿಗೆ ಲೋಷನ್ ಹಚ್ಚಿ ನೋವುಂಟು ಮಾಡುತ್ತಿದ್ದರು. ಜೂನಿಯರ್ ವಿದ್ಯಾರ್ಥಿಗಳು ನೋವಿನಿಂದ ಕಿರುಚಾಡಿದಾಗ ಬಲವಂತವಾಗಿ ಲೋಷನ್ ಅನ್ನು ಬಾಯಿಗೆ ತುಂಬಿಸುತ್ತಿದ್ದರು. ಈ ಕೃತ್ಯಗಳನ್ನು ವಿಡಿಯೋ ಮಾಡಿಕೊಂಡು, ಯಾರಿಗಾದರೂ ಹೇಳಿದರೆ ಶಿಕ್ಷಣಕ್ಕೆ ತೊಂದರೆ ಕೊಡುವುದಾಗಿ ಬೆದರಿಕೆ ಹಾಕುತ್ತಿದ್ದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರಿನನ್ವಯ ರ‍್ಯಾಗಿಂಗ್ ಮಾಡಿದ್ದ ಐವರು ತಪ್ಪಿತಸ್ಥ ವಿದ್ಯಾರ್ಥಿಗಳನ್ನು ಬಂಧಿಸಿದ್ದು. ಕಳೆದ ವರ್ಷ ನವೆಂಬರ್‌ನಿಂದ ನಿರಂತರವಾಗಿ ರ‍್ಯಾಗಿಂಗ್‌ಗೆ ಒಳಗಾಗಿರುವುದಾಗಿ ತಿರುವನಂತಪುರಂ ಮೂಲದ ಜೂನಿಯರ್ ವಿದ್ಯಾರ್ಥಿಗಳು ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ಆರೋಪಿ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ, 2011ರ ಅಂಟಿ-ರ‍್ಯಾಗಿಂಗ್ ಕಾಯ್ದೆಯಡಿ ಬಂಧಿಸಲಾಗಿದೆ.