ದೆಹಲಿ : ನಮ್ಮ ಮೆಟ್ರೋ ಟಿಕೆಟ್ ದರದಲ್ಲಿ ಏರಿಕೆಯಾದ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ‘ ಬೆಂಗಳೂರಿಗರ ಬೆನ್ನಿಗೆ ಅಧಿಕಾರಿಗಳು ಬರೆ ಎಳೆದಿದ್ದಾರೆ. ಇದರಿಂದ ಬೆಂಗಳೂರಿನ ಜನರಿಗೆ ಸಮಸ್ಯೆಯಾಗಿದೆ. ಈ ಕುರಿತು ಕೇಂದ್ರ ಸಚಿವರಿಗೆ ಮಾಹಿತಿ ನೀಡಿದ್ದೇನ ಎಂದು ಹೇಳಿದರು.
ದೆಹಲಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ತೇಜಸ್ವಿ ಸೂರ್ಯ ‘ಮೆಟ್ರೋ ದರ ಏರಿಕೆಯಾಗಿ ಸಮಸ್ಯೆ ಉಂಟಾಗಿದೆ, ಮಧ್ಯಮ ವರ್ಗದ ಜನರಿಗೆ 50% ಏರಿಕೆ ಮಾಡಿರುವುದು ಸಮಸ್ಯೆಯಾಗಿದೆ, ಬೆಂಗಳೂರಿಗರ ಬೆನ್ನಿಗೆ ಅಧಿಕಾರಿಗಳು ಬರೆ ಹಾಕಿದ್ದಾರೆ. ರಾಜ್ಯ ಸರ್ಕಾರದ ಅಧಿಕಾರಿಗಳ ನಿರ್ದೇಶನದ ಮೇರೆಗೆ ದರ ಏರಿಕೆ ಮಾಡಲು ಸೂಚಿಸಿತ್ತು. ಮೆಟ್ರೋ ಸಮಿತಿ ತೆಗೆದುಕೊಂಡ ನಿರ್ಧಾರದಿಂದ ಬೆಲೆ ಏರಿಕೆಯಾಗಿದೆ. ಇದೇ ಸಮಿತಿ ಪರಿಷ್ಕೃತ ದರ ಫಿಕ್ಸ್ ಮಾಡಿದೆ.
ಇದನ್ನೂ ಓದಿ :‘ಮೊಬೈಲ್ ಬಿಟ್ಟು ಓದ್ಕೋ’ ತಾಯಿಯ ಮಾತಿನಿಂದ ಮನನೊಂದ ಬಾಲಕಿ ಆತ್ಮಹ*ತ್ಯೆ !
ಕೆಲವು ಭಾಗಗಳಲ್ಲಿ 50% ಮತ್ತು ಕೆಲವು ಭಾಗಗಳಲ್ಲಿ 100% ದರ ಏರಿಕೆ ಮಾಡಲಾಗಿದೆ. ಟ್ರಾಫಿಕ್ನಿಂದ ಬಚಾವ್ ಮಾಡಬೇಕು ಅನ್ನುವ ಕಾರಣಕ್ಕೆ ಮೆಟ್ರೋ ಉಪಯೋಗ ಮಾಡುತ್ತಾರೆ. ಸರಕಾರ ಜನರು ಪ್ರೈವೇಟ್ ಟ್ರಾನ್ಸ್ ಫೋರ್ಟ್ಗಳಿಗಿಂತ ಸರಕಾರದ ಟ್ರಾನ್ಸ್ ಪೋರ್ಟ್ ಉಪಯೋಗಿಸುವ ಸಲುವಾಗಿ ಚಿಂತಿಸಬೇಕು. ಸರ್ಕಾರ ಎರಡು ತಿಂಗಳ ಹಿಂದೆ ದರ ಏರಿಸುವಂತೆ ಪತ್ರ ಬರೆದಿತ್ತು. ಎಲೆಕ್ಟ್ರಿಕ್ ವಾಹಗಳ ಮೇಲೂ 10% ಟ್ಯಾಕ್ಸ್ ಜಾಸ್ತಿ ಯಾಗಿದೆ, ರೈತರ ಬೀಜಗಳಿಗೆ 60% ಜಾಸ್ತಿಯಾಗಿದೆ, ಹಾಲಿನ ದರ ಜಾಸ್ತಿಯಾಗಿದೆ, ಇದೆಲ್ಲದರ ಜೊತೆಗೆ ಮೆಟ್ರೋ ದರ ಜಾಸ್ತಿ ಮಾಡಲು ರಾಜ್ಯ ಸರ್ಕಾರ ಪತ್ರ ಬರೆದಿದೆ.
ಆದರೆ ದರ ಎಷ್ಟು ಪರಿಷ್ಕೃತ ಮಾಡಬೇಕು ಅಂತ ಸಮಿತಿ ನಿರ್ಧಾರ ಮಾಡಿದ. ಇದರಿಂದ ಜನರಿಗೆ ಸಮಸ್ಯೆ ಉಂಟಾಗಿದೆ, ನಿನ್ನೆ ಕೇಂದ್ರ ಸಚಿವರನ್ನು ಭೇಟಿಯಾಗಿ ಮಾಹಿತಿ ಕೊಟ್ಟಿದ್ದೇನೆ, ಬೆಂಗಳೂರು ಮೆಟ್ರೋ ದರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ, ಸದ್ಯ ಮೆಟ್ರೋಗೆ ಹೆಚ್ಚಿನ ಉತ್ತೇಜನ ಕೊಡಬೇಕಿದೆ. ಸಂಸತ್ನಲ್ಲಿಯೂ ಈ ವಿಚಾರದ ಬಗ್ಗೆ ವಿಷಯ ಪ್ರಸ್ತಾಪ ಮಾಡಿದ್ದೇನೆ ಎಂದು ಹೇಳಿದರು.