Wednesday, February 12, 2025

‘ಚೆನ್ನಾಗಿ ನಿದ್ದೆ ಮಾಡಿ’ ಪರೀಕ್ಷೆಯ ಒತ್ತಡದಲ್ಲಿದ್ದ ವಿದ್ಯಾರ್ಥಿಗಳಿಗೆ ದೀಪಿಕಾ ಸಲಹೆ

ದೆಹಲಿ : ಪ್ರಧಾನ ಮಂತ್ರಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಪರೀಕ್ಷೆಯನ್ನು ಎದುರಿಸಲಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದು. ಪರೀಕ್ಷೆಯ ಹಿಂದಿನ ನಿಮ್ಮ ಪೋಷಕರೊಂದಿಗೆ ಮಾತನಾಡಿ ಇದರಿಂದ ನಿಮ್ಮ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎಂದು ಸಲಹೆ ನೀಡಿದರು.

ಪರೀಕ್ಷ ಪೇ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ದೀಪಿಕಾ ಪಡುಕೋಣೆ ‘ಇತರರೊಂದಿಗೆ ಸ್ಪರ್ಧೆ ಮತ್ತು ಹೋಲಿಕೆ ಜೀವನದಲ್ಲಿ ಸಹಜ. ನಮ್ಮ ಬಲ ಮತ್ತು ದೌರ್ಬಲ್ಯವನ್ನು ಕಂಡುಕೊಳ್ಳಬೇಕು. ನಮ್ಮ ಬಲವನ್ನು ಇನ್ನಷ್ಟು ಉತ್ತಮಗೊಳಿಸಿಕೊಂಡು, ದೌರ್ಬಲ್ಯದಿಂದ ಹೊರಬರಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಂಡರೆ ಸ್ಪರ್ಧೆಯನ್ನು ಎದುರಿಸಬಹುದು’ ಎಂದರು.

ಇದನ್ನೂ ಓದಿ :ಖಾಸಗಿ ಅಂಗಕ್ಕೆ ಡಂಬಲ್ಸ್​ ಕಟ್ಟಿ ರ‍್ಯಾಗಿಂಗ್‌ : ಐವರು ನರ್ಸಿಂಗ್​ ವಿದ್ಯಾರ್ಥಿಗಳ ಬಂಧನ

ಭಾರತದಲ್ಲಿ ಮಾನಸಿಕ ಆರೋಗ್ಯಕ್ಕೆ ಪ್ರಾಮುಖ್ಯತೆ ಕೊಡದ ಕಾಲವೊಂದಿತ್ತು. ಮಾನಸಿಕ ಆರೋಗ್ಯವನ್ನು ಕಳಂಕದ ರೀತಿ ನೋಡುತ್ತಿದ್ದರು. ನನ್ನ ಮಾನಸಿಕ ಸಮಸ್ಯೆಯ ಬಗ್ಗೆ ನನ್ನವರೊಂದಿಗೆ ಮಾತನಾಡಿದಾಗ ಮನಸ್ಸು ಹಗುರವಾದ ಅನುಭವಾಗುತ್ತಿತ್ತು. ಹೀಗಾಗಿ ಅಲ್ಲಿಂದ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಅಭಿಯಾನ ಆರಂಭಿಸಿದೆ.

ಖಿನ್ನತೆ, ಆತಂಕ, ಒತ್ತಡ ಯಾರಿಗೆ ಬೇಕಾದರೂ, ಯಾವಾಗ ಬೇಕಾದರೂ ಆಗಬಹುದು. ಮಾನಸಿಕ ಖಿನ್ನತೆ ಎನ್ನುವುದು ಅಗೋಚರ ಕಾಯಿಲೆ’ ಎಂದು ವಿವರಿಸಿದರು. ಇದೇ ವೇಳೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ‘ಚೆನ್ನಾಗಿ ನಿದ್ದೆ ಮಾಡಿ. ವ್ಯಾಯಾಮದ ಅಭ್ಯಾಸವಿರಲಿ, ಚೆನ್ನಾಗಿ ನೀರು ಕುಡಿಯಿರಿ, ಹಿತವಾದ ಗಾಳಿಯಲ್ಲಿ ನಡೆದಾಡಿ ಮತ್ತು ಧ್ಯಾನವನ್ನು ಮಾಡಿ’ ಎಂದು ಸಲಹೆಗಳನ್ನು

RELATED ARTICLES

Related Articles

TRENDING ARTICLES