Wednesday, February 12, 2025

ಪರಂಪರೆ ಮುಂದುವರಿಯಲು ಗಂಡು ಮಗು ಬೇಕೂ: ರಾಮ್​ಚರಣ್​ಗೆ ಚಿರಂಜೀವಿ ಬೇಡಿಕೆ

ಹಿರಿಯ ನಟ ಚಿರಂಜೀವಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆ ಇದೀಗ ಭಾರೀ ಟೀಕೆ ವ್ಯಕ್ತವಾಗಿದ್ದು. ಮನೆ ಲೇಡಿಸ್​ ಹಾಸ್ಟೆಲ್​ ರೀತಿಯಾಗದೆ. ಅದಕ್ಕೆ ಎರಡನೇ ಮಗು ಗಂಡು ಮಗು ಬೇಕೂ ಎಂದು ಹೇಳಿದ್ದೇನೆ. ಆ ಮೂಲಕ ನಮ್ಮ ಲೆಗಸಿ ಮುಂದುವರಿಸಬೇಕು ಎಂದು ಹೇಳಿದ್ಧಾರೆ.

ಹೌದು.. ಕೆಲವು ದಿನಗಳ ಹಿಂದೆ ಬ್ರಹ್ಮಾನಂದಂ’ ಸಿನಿಮಾ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಟ ಚಿರಂಜೀವಿ ಭಾಗಿಯಾಗಿದ್ದರು. ಈ ವೇಳೆ ರಾಮ್‌ ಚರಣ್‌ಗೆ ಎರಡನೇ ಮಗು ಬೇಕು ಅದೂ ಗಂಡು ಮಗು ಆಗಬೇಕು ಎಂದು ಹೇಳಿದ್ದೀಇ. ಆ ಮೂಲಕ ನಮ್ಮ ಲೆಗಸಿ ಮುಂದುವರೆಯಬೇಕು ಎಂದು ಹೇಳಿದ್ದರು. ಇದೀಗ ಈ ಹೇಳಿಕೆ ಭಾರಿ ಟೀಕೆ ವ್ಯಕ್ತವಾಗುತ್ತಿದ್ದು. ಹೆಣ್ಣು ಮಕ್ಕಳು ಮನೆಯಲ್ಲಿ ಇರಬೇಕು ಅಂತಾರೆ ಆದರೆ ನೀವು ನಿಮ್ಮ ಆಸ್ತೆ ಬಗ್ಗೆ ಯೋಚನೆ ಮಾಡಿಕೊಂಡು ಗಂಡು ಮಗು ಬೇಕು ಎನ್ನುತ್ತಿದ್ದೀರಿ ಎಂದು ಟೀಕೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : ನಮ್ಮ ಪೊಲೀಸರು ಕಾಮನ್​ಸೆನ್ಸ್​ ಇಟ್ಟುಕೊಂಡೆ ಕೆಲಸ ಮಾಡಿದ್ದಾರೆ: ಡಿ.ಕೆ ಶಿವಕುಮಾರ್​

‘ನಾನು ಮನೆಯಲ್ಲಿ ಮೊಮ್ಮಕ್ಕಳ ಜೊತೆ ಇರುವಾಗ ಒಂದು ಲೇಡಿಸ್ ಹಾಸ್ಟೆಲ್‌ ವಾರ್ಡನ್‌ ಎಂಬಂತೆ ನನಗೆ ಭಾಸವಾಗುತ್ತದೆ. ಸುತ್ತಾ ಹೆಣ್ಣುಮಕ್ಕಳೇ ಇದ್ದಾರೆ. ಅದಕ್ಕೆ ಈ ಭಾರಿ ಒಂದು ಗಂಡು ಮಗು ಬೇಕು ಕಣೋ ಎಂದು ರಾಮ್​ಚರಣ ಬಳಿ ಕೋರಿಕೆ ಇಟ್ಟಿದ್ದೀನಿ. ಮೊದಲ ಮಗು ಕ್ಲಿಂಕಾರ ಅಂದ್ರೆ ಬಹಳ ಮುದ್ದು ಆದರೆ ರಾಮ್‌ ಚರಣ್‌ಗೆ ಮತ್ತೊಂದು ಹೆಣ್ಣು ಆಗಿಬಿಟ್ಟರೆ ಅನ್ನೋ ಭಯ ಶುರುವಾಗಿದೆ’ ಎಂದು ಚಿರಂಜೀವಿ ಹೇಳಿದ್ದಾರೆ.

 

RELATED ARTICLES

Related Articles

TRENDING ARTICLES