Tuesday, February 11, 2025

ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಹಲ್ಲೆ: ಒದ್ದು ಒಳಗೆ ಹಾಕಿದ ಪೊಲೀಸರು !

ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ ಎಂದು ಅದೆಷ್ಟೋ ಯುವಕರು ತಮ್ಮ ಪ್ರೀತಿಯ ಹಿಂದೆ ಬಿದ್ದು, ಕಾಡಿ ಬೇಡಿಯಾದರೂ ತಮ್ಮ ಪ್ರೀತಿಯನ್ನು ಉಳಸಿಕೊಳ್ಳೋದಕ್ಕೆ ಪ್ರಯತ್ನಿಸುತ್ತಾರೆ. ಆದರೆ ಕೆಲವೊಮ್ಮೆ ಸಿಕ್ಕಾಪಟ್ಟೆ ಅಟಿಟ್ಯೂಡ್​ ಇರೋ ಹುಡುಗರು ಮಾತ್ರ ತಮ್ಮ ಪ್ರೀತಿಯನ್ನು ನಿರಾಕರಿಸಿದ ಯುವತಿಗೆ ಸರಿಯಾದ ಬುದ್ದಿಯನ್ನೆ ಕಲಿಸೋದಕ್ಕೆ ಮುಂದಾಗ್ತಾರೆ. ಅದೇ ರೀತಿ ಇಲ್ಲೊಬ್ಬ ಪ್ರೇಮಿ ತನ್ನ ಪ್ರೀತಿ ನಿರಾಕರಿಸಿದ ಯುವತಿಗೆ ಸರಿಯಾಗಿ ಬುದ್ದಿಕಲಿಸಿದ್ದಾನೆ.

ಫೆಬ್ರವರಿ 14 ಬಂದರೆ ಸಾಕು ಪ್ರೇಮಿಗಳಿಗೆ ಆ ದಿನ ಹಬ್ಬವೊ ಹಬ್ಬ. ಹೊಸದಾಗಿ ಪ್ರೀತಿಸುವವರು ತಮ್ಮ ಪ್ರೀತಿಯನ್ನು ಹೇಳಿಕೊಳ್ಳೋದಕ್ಕೆ ತುದಿಗಾಲಿನಲ್ಲಿ ನಿಂತಿದ್ದರೆ, ಪ್ರೀತಿಯಲ್ಲಿ ಬಿದ್ದವರು ತಮ್ಮ ಪ್ರೇಮಿ ಜೊತೆ ದಿನವಿಡಿ ಸುತ್ತಾಡೋದಕ್ಕೆ ತುದಿಗಾಲಿನಲ್ಲಿ ಕಾಯ್ತಾ ಇರ್ತಾರೆ. ಇದೀಗ ವ್ಯಾಲೆಂಟೈನ್ ವೀಕ್ ನಡಿತಿದೆ. ಇಲ್ಲೊಬ್ಬ ಯುವಕ ವ್ಯಾಲೇಂಟೇನ್​ ವೀಕ್​ನಲ್ಲಿ, ತಾನು ಇಷ್ಟ ಪಟ್ಟ ಹುಡುಗಿಯ ಮುಂದೆ ಸ್ವೀಟ್​ ನೀಡುವ ಮೂಲಕ ತನ್ನ ಪ್ರೀತಿಯನ್ನು ವ್ಯಕ್ತ ಪಡಿಸಿದ್ದಾನೆ.

ಇದನ್ನೂ ಓದಿ :ಅಮಾಯಕರು ಎಂದು ಕೇಸ್​ ವಾಪಾಸ್​ ಪಡೆದಿದ್ದರಿಂದ ಹೀಗಾಗಿದೆ: ಬೊಮ್ಮಾಯಿ

ಆದರೆ ಆ ಯುವತಿಗೆ ಈತನ ಮೇಲೆ ಪ್ರೀತಿ ಇಲ್ಲ ಅಂತ ಕಾಣುತ್ತೆ. ಆಕೆ ಆತನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಹಾಗೆ ಆತ ನೀಡಿದ ಸ್ವೀಟನ್ನು ಕೂಡ ತಿರಸ್ಕರಿಸಿದ್ದಾಳೆ. ತನ್ನ ಗೆಳೆಯನ ಮುಂದೆನೆ ತನ್ನ ಪ್ರೀತಿಯನ್ನು ನಿರಾಕರಿಸಿದ ಯುವತಿಯ ಮೇಲೆ ಕೋಪಗೊಂಡ ಭಗ್ನ ಪ್ರೇಮಿ, ತನ್ನ ಕೈನಲ್ಲಿದ್ದ ಸ್ವೀಟನ್ನು ಆಕೆಯ ಮೇಲೆ ಎಸೆದಿದ್ದು ಮಾತ್ರವಲ್ಲದೆ, ತನ್ನ ಕೈನಲ್ಲಿದ್ದ ಸ್ವೀಟ್​ ಬಾಕ್ಸನ್ನ್​ ಕೂಡ ಆಕೆಯ ಮೇಲೆ ಎಸೆದಿದ್ದಾನೆ.

ಈ ಘಟನೆ ಉತ್ತರ ಪ್ರದೇಶದ ಅಮ್ರೋಹದಲ್ಲಿ ನಡೆದಿದ್ದು. ತನ್ನ ಪ್ರೀತಿಯನ್ನು ನಿರಾಕರಣೆ ಮಾಡಿದ ಭಗ್ನ ಪ್ರೇಮಿಯೊಬ್ಬನ ಆಕ್ರೋಶದ ಈ ವಿಡಿಯೋ ಇದೀಗ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿ ವೈರಲ್ ಆಗಿದ್ದೆ ತಡ, ಪೊಲೀಸರು ಆ ಯುವಕನನ್ನು ಬಂಧಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರಂತೆ.

RELATED ARTICLES

Related Articles

TRENDING ARTICLES