Tuesday, February 11, 2025

ಹೆಚ್ಚಾಯ್ತು ಟಾಕ್ಸಿಕ್​ ಸಿನಿಮಾ ಬಜೆಟ್​: ಇಂಗ್ಲೀಷ್​ ಭಾಷೆಯಲ್ಲಿ ಸಪರೇಟ್​ ಶೂಟಿಂಗ್​ !

ಕೆಜಿಎಫ್’ ಹಾಗೂ ಕೆಜಿಎಫ್ 2 ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದ ಯಶ್ ಅವರು ಈಗ ಗೀತು ಮೋಹನ್​ದಾಸ್ ಜೊತೆ ‘ಟಾಕ್ಸಿಕ್’ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಸಿನಿಮಾ ಇತ್ತೀಚೆಗೆ ಅಧಿಕೃತವಾಗಿ ಘೋಷಣೆ ಆಗಿದ್ದು, ಯಶ್ ಬರ್ತ್​ಡೇ ದಿನ ಟೀಸರ್ ಕೂಡ ರಿಲೀಸ್ ಆಗಿದೆ. ಈ ಚಿತ್ರದ ಬಜೆಟ್​ ಶೇ.40 ಏರಿಕೆ ಆಗಿದೆ. ಇದಕ್ಕೆ ಕಾರಣ ಆಗಿದ್ದು, ಇದಕ್ಕೆ ಯಶ್ ಮತ್ತು ಗೀತಾ ಮೋಹನ್​ ಅವರ ನಿರ್ಧಾರ ಎಂದು ಹೇಳಲಾಗಿದೆ.

ಟಾಕ್ಸಿಕ್’ ಸಿನಿಮಾದಲ್ಲಿ ಯಶ್​ ಜೊತೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಶೂಟ್ ಭರ್ಜರಿ ವೇಗದಲ್ಲಿ ಸಾಗುತ್ತಿದೆ. ಇದನ್ನು ಕನ್ನಡದ ಜೊತೆ ಪರ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡುವ ಆಲೋಚನೆ ಇದೆ. ಈಗ ಇಂಗ್ಲಿಷ್ ಭಾಷೆಯಲ್ಲೂ ಸಿನಿಮಾ ಶೂಟ್ ಆಗುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ :ಅನಾರೋಗ್ಯ ಪೀಡಿತ ಆರೈಕೆದಾರನನ್ನು ಭೇಟಿಯಾಗಲು ಆಸ್ಪತ್ರೆಗೆ ಬಂದ ಆನೆ

‘ಟಾಕ್ಸಿಕ್’ ಸಿನಿಮಾ ಕನ್ನಡದ ಜೊತೆಗೆ ಇಂಗ್ಲಿಷ್​ನಲ್ಲೂ ಶೂಟ್ ಆಗುತ್ತಿದೆ!

ಹೌದು ಯಶ್ ಹಾಗೂ ಇತರ ಕಲಾವಿದರು ಕನ್ನಡದ ಜೊತೆಗೆ ಇಂಗ್ಲಿಷ್​​ನಲ್ಲೂ ಡೈಲಾಗ್ ಹೇಳುತ್ತಿದ್ದಾರೆ. ಈ ಮೂಲಕ ಸಿನಿಮಾನ ಪ್ಯಾನ್​ ವರ್ಲ್ಡ್ ಮಟ್ಟದಲ್ಲಿ ರಿಲೀಸ್ ಮಾಡಲು ತಂಡ ಪ್ಲ್ಯಾನ್ ಮಾಡಿದೆ.

ಟಾಕ್ಸಿಕ್’ ಚಿತ್ರವನ್ನು ಇಂಗ್ಲಿಷ್​​ಗೆ ಡಬ್ ಮಾಡಬಹುದು. ಆದರೆ, ತಂಡದವರು ಹಾಗೆ ಮಾಡದೆ ಅದೇ ಭಾಷೆಯಲ್ಲಿ ಶೂಟ್ ಮಾಡುವ ಆಲೋಚನೆ ಮಾಡಿದ್ದಾರೆ. ಎರಡು ಭಾಷೆಗಳಲ್ಲಿ ಚಿತ್ರವನ್ನು ಒಟ್ಟಿಗೆ ಶೂಟ್ ಮಾಡುವ ನಿರ್ಧಾರದಿಂದ ಚಿತ್ರದ ಬಜೆಟ್ ಶೇ.40 ಏರಿಕೆ ಆಗಿದೆ. ಈ ಬಜೆಟ್​ನ ಭರಿಸಲು ‘ಟಾಕ್ಸಿಕ್’ ನಿರ್ಮಾಣ ಸಂಸ್ಥೆ ರೆಡಿ ಇದೆ.

ಟಾಕ್ಸಿಕ್ ಭಾರತ​ ಚಿತ್ರರಂಗದ ದುಬಾರಿ ಸಿನಿಮಾ ಎನಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಟಾಕ್ಸಿಕ್​ ಬಜೆಟ್​ ವಿಚಾರದಲ್ಲಿ ಈ ಹಿಂದೆ ಬರೆದಿದ್ದ ಎಲ್ಲಾ ದಾಖಲೆಗಳನ್ನ ಅಳಸಿ ಹಾಕುತ್ತಿದೆ.. ಈಗಾಗಲೇ ಬೆಂಗಳೂರು, ಗೋವಾ ಮೊದಲಾದ ಕಡೆಗಳಲ್ಲಿ ಶೂಟ್ ಮಾಡಲಾಗಿದೆ. ಈ ಚಿತ್ರವನ್ನು ಇಂಗ್ಲಿಷ್​​ನಲ್ಲಿ ಹಂಚಿಕೆ ಮಾಡಲು ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದೆ. ಹಾಲಿವುಡ್ ನಿರ್ಮಾಣ ಸಂಸ್ಥೆಗಳ ಜೊತೆ ಈಗಾಗಲೇ ಯಶ್ ಮಾತುಕತೆ ನಡೆಸಿದ್ದಾರೆ. ಕೆಜಿಎಫ್’ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡುವ ಆಲೋಚನೆ ಯಶ್ ಅವರದ್ದೇ ಆಗಿತ್ತು.  ಈಗ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ರಿಲೀಸ್ ಮಾಡುವ ಆಲೋಚನೆ ಕೂಡ ಅವರದ್ದೇ ಎಂದು ಹೇಳಲಾಗುತ್ತಿದೆ.

RELATED ARTICLES

Related Articles

TRENDING ARTICLES