Wednesday, August 27, 2025
HomeUncategorized2047ಕ್ಕೆ ಈ ದೇಶವನ್ನು ಇಸ್ಲಾಂ ದೇಶವನ್ನಾಗಿ ಮಾಡಲು ಮುಂದಾಗಿದ್ದಾರೆ : ಪ್ರಮೋದ್​ ಮುತಾಲಿಕ್​

2047ಕ್ಕೆ ಈ ದೇಶವನ್ನು ಇಸ್ಲಾಂ ದೇಶವನ್ನಾಗಿ ಮಾಡಲು ಮುಂದಾಗಿದ್ದಾರೆ : ಪ್ರಮೋದ್​ ಮುತಾಲಿಕ್​

ದಾವಣಗೆರೆ : ಮೈಸೂರಿನ ಉದಯಗಿರಿಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ಪ್ರಕರಣದ ಕುರಿತು ಮಾತನಾಡಿದ  ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು. ಈ ದೇಶವನ್ನು ಮುಸ್ಲೀಂ ದೇಶವನ್ನಾಗಿ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದರು.

ದಾವಣಗೆರೆಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಪ್ರಮೋಧ್​ ಮುತಾಲಿಕ್​ ‘ ಉದಯಗಿರಿಯಲ್ಲಿ ಮುಸ್ಲಿಮರೇ ಜಾಸ್ತಿ ಇರುವ ಏರಿಯಾವಾಗಿದ್ದು, ಅಲ್ಲಿ ಈ ಘಟನೆ ನಡೆದಿದೆ. ಯಾರು ತಪ್ಪು ಮಾಡಿದ್ದಾನೋ ಆತನನ್ನು ಬಂಧಿಸಿದ್ದಾರೆ. ಕಾನೂನು, ಸಂವಿಧಾನದ ಪ್ರಕಾರ ತಪ್ಪಿತಸ್ಥನಿಗೆ ಶಿಕ್ಷೆ ಆಗುತ್ತೆ. ಅದನ್ನು ಬಿಟ್ಟು ಕಲ್ಲು ತೂರಾಟ ನಡೆಸಿ ದಾಂದಲೆ‌ ನಡೆಸಿದ್ದು ಎಷ್ಟು ಸರಿ. ಇದು ಪಾಕಿಸ್ತಾನ, ಅಫಘಾನಿಸ್ಥಾನ, ಬಾಂಗ್ಲಾದೇಶ ಅಲ್ಲ ದಾಂಧಲೆ ಮಾಡೋದಕ್ಕೆ. ನಿಮಗೆ ಏನ್ ತೊಂದರೆಯಾಗಿದೆ ಎಂದು ದೂರು ನೀಡಿ ಧರಣಿ ಮಾಡಿ.

ಇದನ್ನೂ ಓದಿ :ಸರಸ್ವತಿ ಪೂಜೆ ವೇಳೆ ತಂದೆ-ತಾಯಿಯರ ಪಾದ ಪೂಜೆ ಮಾಡಿದ ಶಾಲಾ ಮಕ್ಕಳು

ನೀವು ಎಷ್ಟು ಭಾರೀ ಹಿಂದೂ ದೇವರುಗಳ ಮೇಲೆ ಅವಹೇಳನಕಾರಿಯಾಗಿ ಮಾತಾಡಿಲ್ಲ, ನಾವು ಕೂಡ ಈ ರೀತಿ ಎದ್ದರೇ ಏನಾಗಬಹುದು ಹೇಳಿ, ನೀವು ಏನ್ ಬೇಕಾದರೂ ಮಾಡಬಹುದು ಎಂದುಕೊಂಡರೇ ಅದಕ್ಕೆ ಹಿಂದೂ ಸಮಾಜ ಉತ್ತರ ನೀಡುತ್ತೆ. ಕಲ್ಲು ಹೊಡೆದಿರುವವರು ನಾಳೆ ಬೇಲ್​ ತಗೊಂಡು ವಾಪಾಸ್​ ಬಂದು ಇದೇ ಕೆಲಸ ಮತ್ತೆ ಮಾಡುತ್ತಾರೆ.

2047ಕ್ಕೆ ಈ ದೇಶವನ್ನು ಇಸ್ಲಾಂ ದೇಶವನ್ನಾಗಿ ಮಾಡಲು ಈ ರೀತಿ ಮಾಡುತ್ತಿದ್ದಾರೆ. ದೇಶದಲ್ಲಿ ಭಯಾನಕ ವಾತವರಣ ನಿರ್ಮಾಣ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಈ ಘಟನೆಗೆ ಮುಸ್ಲಿಂರಿಗಿಂತ ಕಾಂಗ್ರೆಸ್​ನವರೇ ಹೆಚ್ವು ಹೊಣೆ ಆಗುತ್ತಾರೆ. ಕಾಂಗ್ರೆಸ್ ಓಟ್ ಬ್ಯಾಂಕ್​ಗಾಗಿ ಈ ರೀತಿ ಮುಸ್ಲಿಂ ಗೂಂಡಾಗಳಿಗೆ ಕುಮ್ಮಕ್ಕು ಕೊಡ್ತದೆ
ಕೆಜೆ ಹಳ್ಳಿ ಡಿಜೆ ಹಳ್ಳಿ, ಹುಬ್ಬಳ್ಳಿ ಶಿವಮೊಗ್ಗ ಸೇರಿದಂತೆ ಹಲವು ಘಟನೆಗಳಲ್ಲಿ ಪೊಲೀಸರು ಓಡಿ ಹೋಗುವಂತಾಗಿದೆ, ಕೂಡಲೇ ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಿ ಅವರು ಕೆಲಸ ಮಾಡುತ್ತಾರೆ ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments