Tuesday, February 11, 2025

ಮೆಟ್ರೋ ಟಿಕೆಟ್​​​ ದರ ಏರಿಕೆ ವಿರೋಧಿಸಿ ಸಂಸತ್​ನಲ್ಲಿ ಧ್ವನಿ ಎತ್ತಿದ ಸಂಸದ ಸೂರ್ಯ

ದೆಹಲಿ : ಬೆಂಗಳೂರಿನ ನರನಾಡಿಯಂತೆ ಕಾರ್ಯನಿರ್ವಹಿಸುವ ನಮ್ಮ ಮೆಟ್ರೋದ ಟಿಕೆಟ್​ ದರದಲ್ಲಿ ಘಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು. ಈ ಕುರಿತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸಂಸತ್​ನಲ್ಲಿ ಧ್ವನಿ ಎತ್ತಿದ್ದಾರೆ.

ಸಂಸತ್‌ನ ಶೂನ್ಯ ವೇಳೆಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ ‘ಮೆಟ್ರೊ ರೈಲಿನಲ್ಲಿ ಕಡಿಮೆ ಅಂತರದ ದೂರ ಪ್ರಯಾಣ ಮಾಡುವವರೂ ಮೊದಲು ಪಾವತಿಸುವುದಕ್ಕಿಂತ ದ್ವಿಗುಣ ಹಣ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಟ್ರೋ ಟಿಕಟ್​ ಬೆಲಯಲ್ಲಿ ಏರಿಕೆಯಾಗಿರುವುದು ಮಧ್ಯಮ ವರ್ಗದ ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀಳಲಿದೆ.

ಇದನ್ನೂ ಓದಿ :ಕುಂಭಮೇಳದಿಂದ ವಾಪಾಸಾಗುವ ವೇಳೆ ಭೀಕರ ಅಪಘಾತ: 9 ಮಂದಿ ಸಾ*ವು

ಮೆಟ್ರೋ ಸುಸ್ಥಿರ ಸಾರ್ವಜನಿಕರ ಸಾರಿಗೆಯಾಗುವ ಬದಲು ದುಬಾರಿ ಸಾರಿಗೆಯಾಗುತ್ತಿದೆ. ಕಡಿಮೆ ಅಂತರದಲ್ಲಿ ಸಂಚರಿಸುವ  ಜನರಿಗೆ ಶೇಕಡಾ 100ರಷ್ಟು ಬೆಲೆ ಏರಿಕೆ ಮಾಡಲಾಗಿದೆ. ಇದಿರಿಂದ ಜನರಿಗೆ ಹೆಚ್ಚು ಅನಾನುಕೂಲವಾಗಿದೆ.  ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಪ್ರಯಾಣದ ದರದ ವ್ಯತ್ಯಾಸವನ್ನು ಪರಿಶೀಲಿಸಿ, ಸಾಮಾನ್ಯ ಜನರಿಗೆ ಹೆಚ್ಚು ಕೈಗೆಟುಕುವಂತೆ ಮಾಡಲು ಟಿಕೆಟ್ ದರ ನಿಗದಿಪಡಿಸುವಂತೆ ಒತ್ತಾಯಿಸುತ್ತೇನೆ’ ಎಂದು ಹೇಳಿದರು.

RELATED ARTICLES

Related Articles

TRENDING ARTICLES