Wednesday, August 27, 2025
HomeUncategorizedಮೊದಲ ಹೆಂಡತಿಯನ್ನು ಅರ್ಧದಲ್ಲಿಯೆ ಬಿಟ್ಟು ಹೋದ ಮೌಲ್ವಿ.

ಮೊದಲ ಹೆಂಡತಿಯನ್ನು ಅರ್ಧದಲ್ಲಿಯೆ ಬಿಟ್ಟು ಹೋದ ಮೌಲ್ವಿ.

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಅಂತ ಹೇಳುವ ಗಂಡಂದಿರು ಇದ್ದಾರೆ. ಇನ್ನು ಕೆಲವರು ಹೊಸ ಹೆಂಡತಿ ಸಿಕ್ಕಿದಳು ಅಂದ ತಕ್ಷಣ, ಹಳೆ ಹೆಂಡತಿ ಸಹವಾಸ ಸಾಕು ಅಂದ್ಕೊಂಡು ಹೆಂಡತಿಯನ್ನು ಅರ್ದದಲ್ಲಿಯೆ ಬಿಟ್ಟು ಕೈ ಕೊಟ್ಟು ಹೋಗುವ ಗಂಡಂದಿರು ಇದ್ದಾರೆ. ಇಲ್ಲೊಬ್ಬ ಮೌಲ್ವಿ ಹೊಸ ಹೆಂಡತಿ ಸಿಕ್ಕಿದಳೆಂದು ಹಳೆ ಹೆಂಡತಿಯನ್ನುಮೊದಲ ಹೆಂಡತಿಯನ್ನು ಅರ್ಧದಲ್ಲಿಯೆ ಬಿಟ್ಟು ಹೋದ ಮೌಲ್ವಿ.
ರೈಲ್ವೇ ಸ್ಟೇಶನ್​ಲ್ಲಿಯೆ ಬಿಟ್ಟು ಹೋಗುತ್ತಿದ್ದಾನೆ ನೋಡಿ. ಗಂಡನೆ ದೇವರು ಅಂದ್ಕೊಂಡಿರುವ ಹೆಂಡತಿ ನನ್ನ ಬಿಟ್ಟು ಹೋಗ್ಬೇಡಾ ಅಂತ ಚಲಿಸುತ್ತಿರುವ ರೈಲಿನ ಹಿಂದೆನೆ ಓಡಿ ಬರುತ್ತಿರುವ ಈ ದೃಶ್ಯಾವಳಿ ಮನ ಕಲಕುವಂತಿದೆ.

ಈ ಘಟನೆ ಬಾಂಗ್ಲಾ ದೇಶದ ಚಿತ್ತಗಾಂಗ್​ನಲ್ಲಿ ನಡೆದಿದ್ದು, ಮೌಲ್ವಿಯೊಬ್ಬ ಹಳೆ ಹೆಂಡತಿ ಬೇಡ ಹೊಸ ಹೆಂಡತಿ ಬೇಕು ಅಂತ ಎರಡನೇ ಮದುವೆಯಾಗಿದ್ನಂತೆ. ಹಾಗೆ ಹೊಸ ಹೆಂಡತಿ ಬಂದ ತಕ್ಷಣ ಈ ಮೌಲ್ವಿಗೆ ಹಳೆ ಹೆಂಡತಿ ಬೇಡ ಅಂತ ಅನ್ನಿಸಿದೆ. ಹೊಸ ಹೆಂಡತಿಯೊಂದಿಗೆ ಹೊಸದಾಗಿ ಸಂಸಾರ ಶುರು ಮಾಡೋದಕ್ಕೆ ಚಿತ್ತಗಾಂಗ್​ನತ್ತ ಹೊರಟಿದ್ದನಂತೆ ಅಷ್ಟರಲ್ಲಿ ಈ ವಿಷಯ ಹಳೆ ಹೆಂಡತಿಗೆ ಗೊತ್ತಾಗಿ ಆಕೆ ಚಿತ್ತಗಾಂಗ್​ ರೈಲ್ವೇ ಸ್ಟೇಶನ್​ಗೆ ಆಗಮಿಸಿ ದಯವಿಟ್ಟು ನನ್ನ ಬಿಟ್ಟು ಹೋಗ್ಬೇಡಾ ಅಂತ ಗಂಡನ ಬಳಿ ಗೋಗರೆದಿದ್ದಾಳೆ.

ಆದರೆ ಅದಾಗಲೆ ಹೊಸ ಹೆಂಡತಿ ಬಂದ ಖುಶಿಯಲ್ಲಿದ್ದ ಈ ಮೌಲ್ವಿ ರೈಲ್ವೇ ಸ್ಟೇಶನ್​ನಲ್ಲಿಯೆ ತನ್ನ ಹಳೆ ಹೆಂಡತಿಯ ಮೇಲೆ ಹಲ್ಲೆ ಮಾಡಿದ್ದು ಮಾತ್ರವಲ್ಲದೆ, ಆಕೆಯನ್ನು ಅಲ್ಲಿಯೆ ಬಿಟ್ಟು ರೈಲು ಹತ್ತಿದ್ದಾನೆ. ಗಂಡನೆ ದೇವರು ಅಂದ್ಕೊಂಡಿದ್ದ ಆತನ ಮೊದಲ ಪತ್ನಿ ಚಲಿಸುತ್ತಿರುವ ರೈಲಿನ ಹಿಂದೆ ಓಡಿ ಬರುತ್ತಿದ್ದಾಳೆ ನೋಡಿ. ತನ್ನನ್ನು ಬಿಟ್ಟು ಹೋಗ್ಬೇಡ ಅಂತ ಗಂಡನ ಪಾದವನ್ನು ಹಿಡಿಯುವ ಪ್ರಯತ್ನ ಮಾಡ್ತಿದ್ದಾಳೆ. ಆದರೆ ಈ ಪಾಪಿ ಗಂಡ ಮಾತ್ರ ಒಂದಿಷ್ಟು ಕರುಣೆನೆ ಇಲ್ಲದೆ, ಆಕೆಯ ಕೈಯನ್ನು ಕಾಲಿನಿಂದ ತುಳಿದು, ಆಕೆಯನ್ನು ಓಡಿಸುವ ಪ್ರಯತ್ನ ಮಾಡುತ್ತಿದ್ದಾನೆ.

ಇದನ್ನೂ ಓದಿ :ಮಂಚದ ವಿಚಾರಕ್ಕೆ ಜಗಳ: ಸ್ವಂತ ಅಣ್ಣನಿಗೆ ಚಾಕು ಇರಿದು ಕೊ*ಲೆ ಮಾಡಿದ ತಮ್ಮ !

ಕೊನೆಗೂ ರೈಲು ವೇಗ ಪಡೆದ ತಕ್ಷಣ ಆಕೆ ತನ್ನ ವ್ಯರ್ಥ ಪ್ರಯತ್ನವನ್ನು ಕೈ ಬಿಟ್ಟು, ತನ್ನನ್ನು ಬಿಟ್ಟು ಹೋಗುತ್ತಿರುವ ಗಂಡನನ್ನು ಅಸಹಾಯಕಳಾಗಿ ನಿಂತು ನೋಡುತ್ತಿರುವ ಈ ದೃಶ್ಯವನ್ನು ನೋಡುವಾಗ ಮನಸ್ಸಿಗೆ ಅದ್ಯಾಕೊ ತೀರಾ ಸಂಕಟವಾಗುತ್ತದೆ. ಮನ ಕಲಕುವ ಈ ದೃಶ್ಯವನ್ನು ರೈಲಿನ ಇತರ ಪ್ರಯಾಣಿಕರು ಸೆರೆ ಹಿಡಿದಿದ್ದು, ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್​ ಮಾಡಿದ್ದಾರೆ.. ಈ ದೃಶ್ಯಾವಳಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇಂತಹ ಪಾಪಿ ಗಂಡನಿಗೆ ನೆಟ್ಟಿಗರು ಹಿಡಿ ಶಾಪ ಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments