Tuesday, February 11, 2025

ಮಂಚದ ವಿಚಾರಕ್ಕೆ ಜಗಳ: ಸ್ವಂತ ಅಣ್ಣನಿಗೆ ಚಾಕು ಇರಿದು ಕೊ*ಲೆ ಮಾಡಿದ ತಮ್ಮ !

ರಾಮನಗರ : ಮನೆಯಲ್ಲಿದ್ದ ಮಂಚದ ಮೇಲೆ ಮಲಗುವ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಮನಗರದಲ್ಲಿ ನಡೆದಿದ್ದು. ಸ್ವಂತ ತಮ್ಮನೇ ಅಣ್ಣನಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ.

ಮಾಗಡಿ ತಾಲೂಕಿನ ಸೀಗೆಕುಪ್ಪೆ ಗ್ರಾಮದಲ್ಲಿ ಘಟನೆ ನಡೆದಿದ್ದು. ಮನೆಯಲ್ಲಿದ್ದ ಮಂಚದ ಮೇಲೆ ಮಲಗುವ ವಿಚಾರಕ್ಕೆ ಅಣ್ಣ ರವಿ ಮತ್ತು ತಮ್ಮ ಉದಯ್​ ನಡುವೆ ಜಗಳವಾಗಿದೆ. ಕುಡಿದ ನೆಶೆಯಲ್ಲಿದ್ದ ಇಬ್ಬರ ನಡುವಿನ ಜಗಳ ತಾರಕಕ್ಕೇರಿದ್ದು. ಈ ವೇಳೆ ತಮ್ಮ ಉದಯ್​ ಅಣ್ಣನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ :ನಟಿ ಸಂಜನಾಗೆ ಸಿಸಿಬಿ ಪೊಲೀಸರ ಶಾಕ್: ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಟ್ವಿಸ್ಟ್​

ಘಟನಾ ಸ್ಥಳಕ್ಕೆ ಮಾಗಡಿ‌ ಡಿವೈಎಸ್ಪಿ ಪ್ರವೀಣ್ ಭೇಟಿ, ಇನ್ಸ್​ಪೆಕ್ಟರ್ ಗಿರಿರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಪೋಲಿಸರು ಆರೋಪಿ ಉದಯ್​ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದು. ಮಾಗಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES