ಗ್ವಾಟೆಮಾಲಾ : ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ಸೇತುವೆ ಮೇಲಿಂದ ಕಂದಕಕ್ಕೆ ಉರುಳಿ ಬಿದ್ದಿದ್ದು. ಪರಿಣಾಮ 53ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು. ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
75 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಸೇತುವೆಯಿಂದ ಉರುಳಿಬಿದ್ದಿದೆ, ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ. ಬಸ್ಸಿನಿಂದ 53 ಶವಗಳನ್ನು ಹೊರತೆಗೆಯಲಾಗಿದೆ. ಬಸ್‌ನಲ್ಲಿ ಸಿಲುಕಿರುವವರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರಿದಿದೆ ಎಂದು ನಗರದ ಅಗ್ನಿಶಾಮಕ ದಳದ ವಕ್ತಾರ ಮೈನೋರ್ ರುವಾನೋ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ :ಮಂಚದ ವಿಚಾರಕ್ಕೆ ಜಗಳ: ಸ್ವಂತ ಅಣ್ಣನಿಗೆ ಚಾಕು ಇರಿದು ಕೊ*ಲೆ ಮಾಡಿದ ತಮ್ಮ !
ಗಂಭೀರವಾಗಿ ಗಾಯಗೊಂಡ ಹಲವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ರುವಾನೋ ಹೇಳಿದ್ದಾರೆ. ಬೆಳಗಿನ ಜಾವದಲ್ಲಿ ಬಹು ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ಬಸ್ ರಸ್ತೆಯಿಂದ ಉರುಳಿ ಸೇತುವೆಯ ಕೆಳಗಿನ ಕಡಿದಾದ ಕಮರಿಗೆ ಉರುಳಿತು. ಬಸ್ಸು 115 ಅಡಿ (35 ಮೀಟರ್) ಆಳದ ಕೊಳಚೆ ನೀರು ತುಂಬಿದ ಕಂದಕಕ್ಕೆ ತಲೆಕೆಳಗಾಗಿ ಬಿದ್ದು ಅರ್ಧ ಮುಳುಗಿತ್ತು. ಗ್ವಾಟೆಮಾಲಾ , ಮಧ್ಯ ಅಮೇರಿಕದ ಒಂದು ದೇಶ. ವಾಯುವ್ಯಕ್ಕೆ ಮೆಕ್ಸಿಕೊ, ನೈರುತ್ಯಕ್ಕೆ ಶಾಂತ ಮಹಾಸಾಗರ, ಈಶಾನ್ಯಕ್ಕೆ ಬೆಲೀಝ್ ಮತ್ತು ಕೆರಿಬ್ಬಿಯನ್ ಸಮುದ್ರ ಹೊಂದಿದೆ.