ಹಾವೇರಿ : ಮೈಲಾರ ಜಾತ್ರೆಗೆ ಹೊರಟ್ಟಿದ್ದ ಎತ್ತಿನಗಾಡಿಗೆ ಬೈಕ್ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆದಿದ್ದು. ಮೃತ ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಗುಡುಗೂರು ಕ್ರಾಸ್ ಬಳಿ ನಡೆದ ಘಟನೆ ನಡೆದಿದ್ದು. ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ಶಶಿಕುಮಾರ್ ಉಪ್ಪಾರ್ (25), ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಗೀಡಿಹಾಳ ಗ್ರಾಮದ ಆಕಾಶ್ ಬಿರದಾರ್ (23), ಬೀದರ್ ಜಿಲ್ಲಾ ಜೋಜಾನ ಗ್ರಾಮದ ದರ್ಶನ್ (23), ಮೂವರು ರಾಣೆಬೇನ್ನೂರು ತಾಲೂಕಿನ ಹನಮಟ್ಟಿಯ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಓದುತ್ತಿದ್ದರು.
ಇದನ್ನೂ ಓದಿ :ಬೆಂಗಳೂರು: ಎರಡು ಕೈಗಳ ಮಧ್ಯ ಮುಗಿಯುವ ರೂಂಗೆ 25 ಸಾವಿರ ಬಾಡಿಗೆ, ವಿಡಿಯೋ ವೈರಲ್
ಆದರೆ ಮೈಲಾರ ಜಾತ್ರೆಗೆ ಹೊರಟಿದ್ದ ಎತ್ತಿನಗಾಡಿಗೆ ವಿದ್ಯಾರ್ಥಿಗಳು ತೆರಳುತ್ತಿದ್ದ ಬೈಕ್ ಡಿಕ್ಕಿಯಾಗಿದ್ದು. ಈ ವೇಳೆ ವಿದ್ಯಾರ್ಥಿಗಳು ರಸ್ತೆಗೆ ಉರುಳಿದ್ದಾರೆ. ಆದರೆ ಈ ವೇಳೆ ಹಿಂದೆ ಬರುತ್ತಿದ್ದ ನೂರಾರು ಎತ್ತಿನ ಗಾಡಿಗಳೂ ರಸ್ತೆಗೆ ಬಿದ್ದ ವಿದ್ಯಾರ್ಥಿಗಳ ಮೇಲೆ ಹರಿದಿವೆ. ಈ ವೇಳೆ ವಿದ್ಯಾರ್ಥಿಗಳು ಧಾರುಣವಾಗಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ರಾಣಿಬೆನ್ನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.