ಕಳೆದ ಜನವರಿ 16ರಂದು ಖ್ಯಾತ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ್ದ ದರೋಡೆಕೋರನೋರ್ವ ನಟನಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದನು. ಚಾಕು ಇರಿತದಿಂದ ತೀವ್ರ ಗಾಯಗೊಂಡಿದ್ದ ನಟನನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರ ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಆಗಿದ್ದ ಸೈಫ್ ಅಲಿಖಾನ್ ಮೊದಲ ಬಾರಿಗೆ ಮಾಧ್ಯಮದ ಜೊತೆ ಮಾತನಾಡಿದ್ದು. ಕಳ್ಳನ ಬಗ್ಗೆ ಕರುಣೆ ವ್ಯಕ್ತಪಡಿಸಿದ್ದಾರೆ.
ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕದಿಯಲು ಮನೆಯೊಳಗೆ ನುಗ್ಗಿದ್ದ ಕಳ್ಳ ದಾಳಿ ಮಾಡಿದಾಗ ಸೈಫ್ ಅವರಿಗೆ ಹಲವು ಗಾಯಗಳು ಆಗಿದ್ದವು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾಗಿದ್ದರೂ ಕೂಡ ಆ ಕಳ್ಳನ ಬಗ್ಗೆ ಸೈಫ್ ಅಲಿ ಖಾನ್ ಅವರು ಕರುಣೆ ತೋರಿಸಿದ್ದಾರೆ.
ಇದನ್ನೂ ಓದಿ :ಪೋಷಕರ ಲೈಂಗಿಕಕ್ರಿಯೆ ವೀಕ್ಷಿಸುತ್ತೀರಾ? ಖ್ಯಾತ ಯೂಟ್ಯೂಬರ್ ರಣವೀರ್ ಹೇಳಿಕೆಗೆ ನೆಟ್ಟಿಗರ ಆಕ್ರೋಶ
ಸ್ವ ರಕ್ಷಣೆಗೆ ವೆಪನ್ ಇಟ್ಟುಕೊಳ್ಳುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ಸೈಫ್ ‘ನನಗೆ ಅಪಾಯ ಇದೆ ಎಂದು ನಾನು ಭಾವಿಸಿಲ್ಲ. ದರೋಡೆಕೋರ ಪ್ಲಾನ್ ಮಾಡಿ ನನ್ನ ಮೇಳೆ ದಾಳಿ ನಡೆಸಿಲ್ಲ. ಈಗ ನನಗಿಂತಲೂ ಅವನ ಜೀವನ ಹಾಳಾಗಿದೆ. ನನಗಿಂತ ಅವನೇ ಪಾಪಾ ಎಂದು ಕರುಣೆ ವ್ಯಕ್ತಪಡಿಸಿದ್ದರು. ಗನ್ ಇಟ್ಟುಕೊಳ್ಳುವ ಕುರಿತು ಮಾತನಾಡಿದ ಸೈಫ್ ‘ ನನಗೆ ಗನ್ ಸಹವಾಸವೇ ಬೇಡ. ಇಂದು ವೇಳೆ ಮನೆಯಲ್ಲಿ ಗನ್ ಇದ್ದರೆ ಅದನ್ನು ಮಕ್ಕಳು ಮುಟ್ಟುವ ಸಾಧ್ಯತೆ ಇರುತ್ತದೆ. ಗನ್ ಇದ್ದಲ್ಲಿ ಅಪಾಯ ಖಂಡಿತವಾಗಿಯೂ ಇರುತ್ತದೆ. ಆದ್ದರಿಂದ ಗನ್ ಬೇಡ ಎಂದು ಹೇಳಿದ್ದಾರೆ.