ಹೈದರಾಬಾದ್: 86 ವರ್ಷದ ಉದ್ಯಮಿಯನ್ನು ಆಸ್ತಿಗಾಗಿ ಸ್ವಂತ ಮೊಮ್ಮಗನೇ ಇರಿದು ಕೊಲೆ ಮಾಡಿರುವ ಘಟನೆ ಹೈದರಬಾದ್ನಲ್ಲಿ ನಡೆದಿದ್ದು. ಮೃತ ಕೈಗಾರಿಕೋದ್ಯಮಿಯನ್ನು 86 ವರ್ಷದ ವೆಲಮತಿ ಚಂದ್ರಶೇಖರ ಜನಾರ್ದನ ರಾವ್ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿಯನ್ನು 29 ವರ್ಷದ ಕಿಲಾರು ಕೀರ್ತಿ ತೇಜ ಎಂದು ಗುರುತಿಸಲಾಗಿದೆ.
ಮೃತ ಜನಾರ್ದನ ರಾವ್ ಅವರು ಪ್ರಸಿದ್ಧ ಕೈಗಾರಿಕೋದ್ಯಮಿಯಾಗಿದ್ದು ಹಡಗು ನಿರ್ಮಾಣ, ಇಂಧನ ಮತ್ತು ಕೈಗಾರಿಕಾ ಅನ್ವಯಿಕೆಗಳು ಸೇರಿದಂತೆ ಬಹು ವಲಯಗಳಿಗೆ ಕೊಡುಗೆಗಳನ್ನು ನೀಡಿದ್ದಾರೆ. ಇವರ ಮೊಮ್ಮಗ ತೇಜ ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಇತ್ತೀಚೆಗೆ ಹೈದರಾಬಾದ್‌ಗೆ ಮರಳಿದ್ದರು ಮತ್ತು ತಮ್ಮ ತಾಯಿಯೊಂದಿಗೆ ರಾವ್ ಅವರ ನಿವಾಸಕ್ಕೆ ಭೇಟಿ ಬೇಟಿ ನೀಡಿದಾಗ ಜಗಳ ನಡೆಯುತ್ತಿದ್ದವು ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ತಿರುಪತಿ ಲಡ್ಡುವಿನಲ್ಲಿ ಕಲಬೆರಕೆ ಆರೋಪ: ನಾಲ್ವರನ್ನು ಬಂಧಿಸಿದ ಸಿಬಿಐ
ಆಸ್ತಿ ಹಂಚಿಕೆ ವಿಚಾರಕ್ಕೆ ಮೃತ ರಾವ್ ಮತ್ತು ಕೀರ್ತಿ ತೇಜ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಉದ್ರಿಕ್ತನಾದ ತೇಜ್ ಜನಾರ್ಧನ್ ರಾವ್ಗೆ ಚಾಕುವಿನಿಂದ ಇರಿದಿದ್ದು. ತನ್ನ ಅಜ್ಜನಿಗೆ ಸುಮಾರು 70 ಬಾರಿ ಇರಿದು ಕೊಲೆ ಮಾಡಿದ್ದಾನೆ. ಈ ವೇಳೆ ತೇಜ್ನ ತಾಯಿ ಸರೋಜಿನಿ ದೇವೆ ಮಧ್ಯಪ್ರವೇಶಿಸಿದ್ದು. ಅವರಿಗೂ ಗಂಭೀರ ಸ್ವರೂಪದ ಗಾಯವಾಗಿದ್ದು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಆಸ್ತಿ ಹಂಚಿಕೆ ವೇಳೆ ತೇಜ್ಗೆ ಪೂರ್ವಜರ ಆಸ್ತಿಯಲ್ಲಿ 4 ಕೋಟಿ ರೂಗಳನ್ನು ನೀಡಲಾಗಿತ್ತು ಎಂದು ವರದಿಯಾಗಿದ್ದು. ಇದರಿಂದ ತೇಜ್ ತನ್ನ ತಾತನ ಮೇಲೆ ತೀವ್ರವಾಗಿ ಕೋಪಗೊಂಡಿದ್ದನು.