Tuesday, February 11, 2025

EVM ಮೇಲೆ ನಂಬಿಕೆ ಇಲ್ಲ, ಕರ್ನಾಟಕದಲ್ಲಿ 185 ರಿಂದ 190 ಸೀಟ್​ ಗೆಲ್ಲಬಹುದಿತ್ತು: ಶಿವರಾಜ್​ ತಂಗಡಗಿ

ಕೊಪ್ಪಳ: ಇವಿಎಂ ಮೇಲೆ ನಂಬಿಕೆ ಇಲ್ಲಾ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್​ ತಂಗಡಗಿ ‘ಕರ್ನಾಟಕದಲ್ಲಿ ಅವರಿಗೆ ಅಂತಹ ವಾತವರಣ ಇರಲಿಲ್ಲ, ಒಂದು ವೇಳೆ evm ಹ್ಯಾಕ್​ ಮಾಡಿದ್ದರೆ ಸಿಕ್ಕಿಬೀಳುತ್ತಿದ್ದರು ಎಂದು ಹೇಳಿದರು.

ಕೊಪ್ಪಳ ನಗರದಲ್ಲಿ ಹೇಳಿಕೆ ನೀಡಿದ ಸಚಿವ ಶಿವರಾಜ್​ ತಂಗಡಗಿ ‘ ಕರ್ನಾಟಕದಲ್ಲಿ ಮಾಡಲಿಕ್ಕೆ ಅವಕಾಶ ಸಿಕ್ಕಿರಕ್ಕಿಲ್ಲಾ, ಇಲ್ಲಿ ನಮಗೆ ವಾತವರಣ ಕೂಡ ಚೆನ್ನಾಗಿದ್ದರಿಂದ ಅಲ್ಲಿ ಹ್ಯಾಕ್​ ಮಾಡಿಲ್ಲ. ಆದರೆ ನಾವು ಕರ್ನಾಟಕದಲ್ಲಿ 185ರಿಂದ 190 ಸೀಟ್​ಗಳನ್ನು ಗೆಲ್ಲಬಹುದಿತ್ತು. ಆದರೆ 135ಕ್ಕೆ ಬಂದಿದ್ದೇವೆ. ಒಂದು ರಾಜ್ಯದ ಚುನಾವಣೆಯಲ್ಲಿ ಬ್ಯಾಲೆಟ್​ ಪೇಪರ್​ನಲ್ಲಿ ಮಾಡಿ ನೋಡಲಿ. ಮಹರಾಷ್ಟ್ರದಲ್ಲಿಮ 34 ಲಕ್ಷ ಓಟಿಂಗ್​ ಹೆಚ್ಚಾಗಿದೆ ಈ ಕುರಿತು ಒಂದಿಲ್ಲ ಒಂದು ದಿನ ದೇಶದ ಜನ ರೊಚ್ಚಿಗೇಳ್ತಾರೆ ಎಂದು ಹೇಳಿದರು.

ಇದನ್ನೂ ಓದಿ :ನನ್ನ ಮೇಲೆ ಹಲ್ಲೆ ನಡೆಸಿದ ಕಳ್ಳನ ಜೀವನ ಹಾಳಾಗಿದೆ: ಸೈಫ್​ ಅಲಿಖಾನ್​

ಬಿಜೆಪಿಯವರು ದೇವರನ್ನು ಗುತ್ತಿಗೆ ಪಡೆದಿದ್ದಾರೆ !

ವಾಲ್ಮಿಕಿ ರಾಮ ಬೇರೆ, ಅಯೋಧ್ಯ‌ ರಾಮ ಬೇರೆ ಅನ್ನೋ ಸಚಿವ ಮಹದೇವಪ್ಪ ಹೇಳಿಕೆ ವಿಚಾರದ ಕುರಿತು ಮಾತನಾಡಿದ ತಂಗಡಗಿ ‘ರಾಮ ಒಬ್ಬನೇ, ಆದ್ರೆ ರಾಮನನ್ನು ಸೃಷ್ಟಿ ಮಾಡಿದ್ದು ವಾಲ್ಮಿಕಿ, ಬಿಜೆಪಿಯವರು ಕೆಲ ದೇವರನ್ನು ಗುತ್ತಿಗೆ ಪಡೆದವರಂತೆ ಮಾಡುತ್ತಿದ್ದಾರೆ. ಅವರು ಅಭಿವೃದ್ಧಿ ಬಗ್ಗೆ ಎಲ್ಲಿ ಮಾತನಾಡಲ್ಲಾ, ನಾವು‌ ರಾಮನ ಭಕ್ತರಿದ್ದೇವೆ, ಆಂಜನೇಯನ ಭಕ್ತರಿದ್ದೇವೆ, ಎಷ್ಟು ದಿನ ನೀವು ಜನರ ಮೇಲೆ ಧರ್ಮದ ಪ್ರಯೋಗ ಮಾಡ್ತೀರಿ.ಜನ ಅವರಿಗೆ ಪಾಠ ಕಲಿಸುತ್ತಾರೆ, ಆದರೆ ಇವಿಎಂ ಅವರಿಗೆ ಸಾಥ್ ನೀಡುತ್ತದೆ. ನಾನು ದೇವರನ್ನು ನಂಬುತ್ತೇನೆ. ಸಾಧ್ಯವಾದ್ರೆ ಪ್ರಯಾಗ್​ ಹೋಗುತ್ತೇನೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES