Saturday, February 8, 2025

ದೆಹಲಿಯಲ್ಲಿ ಕಾಂಗ್ರೆಸ್​ಗೆ ಹಿನ್ನಡೆ: ಟ್ವಿಟ್​ ಮಾಡಿ ವ್ಯಂಗ್ಯವಾಡಿದ ಒಮರ್ ಅಬ್ದುಲ್ಲಾ

ಜಮ್ಮು& ಕಾಶ್ಮೀರ: ದೆಹಲಿ ಚುನಾವಣೆ ಮತ ಎಣಿಕೆ ಕಾರ್ಯ ಆರಂಭವಾಗಿದ್ದು. ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಇದರ ನಡುವೆ ಇಂಡಿ ಒಕ್ಕೂಟದ ಮಿತ್ರಪಕ್ಷ ನ್ಯಾಷನಲ್​​ ಕಾನ್ಫರೆನ್ಸ್​ ಪಕ್ಷದ ಮುಖ್ಯಸ್ಥ ಮತ್ತು ಜಮ್ಮು ಕಾಶ್ಮೀರ್​ದ ಮುಖ್ಯಮಂತ್ರಿ ಒಮರ್​ ಅಬ್ದುಲ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು. ಇಂಡಿ ಒಕ್ಕೂಟದಲ್ಲಿರುವ ಆತಂರಿಕ ಭಿನ್ನಾಭಿಪ್ರಾಯದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮತ್ತು ಭಾರತದ ಮಿತ್ರಪಕ್ಷ ಒಮರ್ ಅಬ್ದುಲ್ಲಾ ಅವರು ಸಾಮಾಜಿಕ ಜಾಲತಾಣ ಎಕ್ಷ್​ನಲ್ಲಿ ಆಪ್ ಮತ್ತು ಕಾಂಗ್ರೆಸ್​ ನಡುವಿನ ಉದ್ವಿಗ್ನತೆಯನ್ನು ಎತ್ತಿ ತೋರಿಸಿದರು. ಸಂತರೊಬ್ಬರ ಮೀಮ್​ ಶೇರ್​ ಮಾಡಿರುವ ಒಮರ್ ಅಬ್ದುಲ್ಲಾ  “ಔರ್ ಲಾಡೋ ಆಪಾಸ್ ಮೇ!!!” (ನಿಮ್ಮ ನಡುವೆ ಹೋರಾಡುತ್ತಲೇ ಇರಿ) ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಇಂಡಿಯಾ ಒಕ್ಕೂಟದಲ್ಲಿ ನಡೆಯುತ್ತಿರುವ ಆತಂರಿಕ ಕಚ್ಚಾಟದಿಂದ ಮತ್ತೊಬ್ಬರಿಗೆ ಲಾಭವಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ :ಸರಳವಾಗಿ ಮಗನ ಮದುವೆ ಮಾಡಿ ಕ್ಷಮೆ ಕೇಳಿದ ಗೌತಮ್​ ಅದಾನಿ

ದೆಹಲಿ ಚುನಾವಣೆಯಲ್ಲಿ ಮೈತ್ರಿ ಪಕ್ಷವಾಗಿ ಚುನಾವಣೆ  ಎದುರಿಸದೆ ಕಾಂಗ್ರೆಸ್​ ಮತ್ತು ಎಎಪಿ ಬೇರೆಯಾಗಿ ಸ್ಪರ್ಧೆ ಮಾಡಿದರು. ರಾಹುಲ್​ ಗಾಂಧಿ ಕೇಜ್ರಿವಾಲ್​ ವಿರುದ್ದ ವಾಗ್ದಾಳಿ ನಡೆಸಿದರೆ. ಮತ್ತೊಂದೆಡೆ ಕೇಜ್ರಿವಾಲ್​ ರಾಹುಲ್​ ಗಾಂಧಿಗೆ ಟೀಕಾ ಪ್ರಹಾರ ನಡೆಸುತ್ತಿದ್ದರು. ಇವೆಲ್ಲದರಿಂದ ಬಿಜೆಪಿಗೆ ಲಾಭವಾಗಿದ್ದು. ಇವರಿಬ್ಬರ ಕಚ್ಚಾಟದಲ್ಲಿ ಇಂಡಿಯಾ ಕೂಟಕ್ಕೆ ಹಾನಿಯಾಗುತ್ತಿದೆ ಎಂಬ ಅರ್ಥದಲ್ಲಿ ಓಮರ್​ ಅಬ್ದುಲ್ಲಾ ಪೋಸ್ಟ್​ ಮಾಡಿ ವ್ಯಂಗ್ಯವಾಡಿದ್ದಾರೆ.

RELATED ARTICLES

Related Articles

TRENDING ARTICLES