ಬೀದರ್ : ಮಗಳು ಪ್ರೀತಿ ಮಾಡಿದ್ದಳು ಎಂಬ ಕಾರಣಕ್ಕೆ ತಂದೆಯೋರ್ವ ಮಗಳ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿರುವ ಘಟನೆ ಬೀದರ್ನಲ್ಲಿ ನಡೆದಿದ್ದು. ಮೃತ ಯುವತಿಯನ್ನು 18 ವರ್ಷದ ಮೋನಿಕಾ ಮೋತಿರಾಮ್ ಜಾಧವ್ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿಯನ್ನು
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬರಗೇನ್ ತಾಂಡಾದಲ್ಲಿ ನಿನ್ನೆ ನಡೆದ ಘಟನೆ ನಡೆದಿದ್ದು. ಮೋನಿಕಾ ಮೋತಿರಾಮ ಜಾಧವ್ ಎಂಬಾಕೆ ತಂದೆಯ ವಿರೋಧದ ನಡುವೆ ಯುವಕನೋರ್ವನನ್ನು ಪ್ರೀತಿಸುತ್ತಿದ್ದಳು. ಈ ಬಗ್ಗೆ ತಂದೆ ಮಗಳ ನಡುವೆ ಅನೇಕ ಬಾರಿ ವಾಗ್ವಾದವು ನಡೆದಿತ್ತು. ಪ್ರೀತಿ-ಪ್ರೇಮದಿಂದ ದೂರವಿರು, ಒಳ್ಳೆ ಹುಡುಗನನ್ನು ನೋಡಿ ಮದುವೆ ಮಾಡುತ್ತೇನೆ ಎಂದು ತಂದೆ ಮಗಳಿಗೆ ಬುದ್ದಿ ಹೇಳಿದ್ದನು.
ಆದರೆ ಇದಕ್ಕೆಲ್ಲಾ ಜಗ್ಗದ ಮೋನಿಕಾ ತಾನೂ ಪ್ರೀತಿಸುತ್ತಿದ್ದ ಬಗ್ಗೆ ತಂದೆಯ ಬಳಿ ಹೇಳಿದ್ದಲ್ಲದೆ, ಆತನನ್ನೆ ಮದುವೆಯಾಗುವುದಾಗಿ ಹೇಳಿದ್ದಳು. ಇದರಿಂದ ಕೋಪಗೊಂಡಿದ್ದ ಮೋನಿಕಾ ತಂದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಡುಗೆ ಮಾಡುತ್ತಿದ್ದ ಮಗಳ ಕುತ್ತಿಗೆಗೆ ಹಗ್ಗ ಬಿಗಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ :ದೆಹಲಿಯಲ್ಲಿ ಕಾಂಗ್ರೆಸ್ಗೆ ಹಿನ್ನಡೆ: ಟ್ವಿಟ್ ಮಾಡಿ ವ್ಯಂಗ್ಯವಾಡಿದ ಒಮರ್ ಅಬ್ದುಲ್ಲಾ
ಹಲ್ಲೆಯಿಂದ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ಮೋನಿಕಾ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ಘಟನೆ ನಂತರ ಆರೋಪಿ ತಂದೆ ಮೋತಿರಾಮ್ ಸ್ಥಳದಿಂದ ಪರಾರಿಯಾಗಿದ್ದು ಯುವತಿಯ ತಾಯಿ ಭಾಗುಬಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಸಂತಪೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.